BREAKING : ಹಮಾಸ್ ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಇಸ್ರೇಲ್ ಯೋಧೆಯ ಶವ ಪತ್ತೆ

ಅಕ್ಟೋಬರ್ 7 ರಂದು ಫೆಲೆಸ್ತೀನ್ ಭಯೋತ್ಪಾದಕ ಗುಂಪು ಹಮಾಸ್ ನಿಂದ ಅಪಹರಣಕ್ಕೊಳಗಾದ 19 ವರ್ಷದ ಇಸ್ರೇಲಿ ಮಹಿಳಾ ಸೈನಿಕನನ್ನು ಗಾಜಾ ಪಟ್ಟಿಯಲ್ಲಿ ಕೊಲೆ ಮಾಡಲಾಗಿದೆ ಎಂದು ಇಸ್ರೇಲ್ ರಕ್ಷಣಾ ಪಡೆಗಳು (IDF) ಹೇಳಿವೆ.

ಗಾಝಾದ ಅತಿದೊಡ್ಡ ಆಸ್ಪತ್ರೆ ಅಲ್-ಶಿಫಾದ ಪಕ್ಕದಲ್ಲಿ 19 ವರ್ಷದ ಕಾರ್ಪೊರಲ್ ನೋವಾ ಮಾರ್ಸಿಯಾನೊ ಅವರ ಶವವನ್ನು ಐಡಿಎಫ್ ಪಡೆಗಳು ಪತ್ತೆ ಮಾಡಿವೆ.”19 ವರ್ಷದ ಸಿಪಿಎಲ್ ನೋವಾ ಮಾರ್ಸಿಯಾನೊ ಅವರನ್ನು ಅಕ್ಟೋಬರ್ 7 ರಂದು ಹಮಾಸ್ ಭಯೋತ್ಪಾದಕರು ಅಪಹರಿಸಿದ್ದರು. ಗಾಜಾದ ಶಿಫಾ ಆಸ್ಪತ್ರೆಯ ಪಕ್ಕದಲ್ಲಿ ಐಡಿಎಫ್ ಪಡೆಗಳು ಆಕೆಯ ಶವವನ್ನು ಪತ್ತೆ ಮಾಡಿ ಹೊರತೆಗೆದಿವೆ.

ಹಮಾಸ್ ಉಗ್ರರ ಒತ್ತೆಯಾಳಾಗಿದ್ದ, 5 ಮಕ್ಕಳ ತಾಯಿಯೊಬ್ಬಳನ್ನು ಹಮಾಸ್ ಉಗ್ರರು, ಇದೇ ಜಾಗದಲ್ಲಿ ಕೊಂದು ಬಿಸಾಕಿದ್ದು, ಈಕೆಯ ಮೃತದೇಹ ಕೂಡ ಪತ್ತೆಯಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read