ಬೆಂಗಳೂರು: ಬೆಂಗಳೂರಿನಲ್ಲಿ 13 ವರ್ಷದ ಬಾಲಕ ಡಿಮನ್ ರಾಜ್ ನಾಪತ್ತೆಯಾಗಿದ್ದಾನೆ. 7ನೇ ತರಗತಿ ಓದುತ್ತಿದ್ದ ಗೊರಗುಂಟೆಪಾಳ್ಯದ ನಿವಾಸಿಯಾಗಿರುವ ಡಿಮನ್ ರಾಜ್ ಎಂದಿನಂತೆ ಬೆಳಿಗ್ಗೆ ಮನೆಯಿಂದ ಟ್ಯೂಷನ್ ಗೆ ಹೋಗಿದ್ದ.
ಆದರೆ, ಟ್ಯೂಷನ್ ಗೆ ಹೋಗದೆ ಕಂಠೀರವ ಸ್ಟೇಡಿಯಂಗೆ ಹೋಗಿದ್ದ ಡಿಮನ್ ಅಲ್ಲಿ ಜಾವೆಲಿನ್ ಥ್ರೋ ಪ್ರಾಕ್ಟೀಸ್ ಮಾಡುವುದನ್ನು ನೋಡಲು ಹೋಗಿದ್ದಾನೆ. ಸ್ಟೇಡಿಯಂನಲ್ಲಿ ನೀರಜ್ ಚೋಪ್ರಾ ಜೊತೆಗೆ ಡಿಮನ್ ಫೋಟೋ ತೆಗೆಸಿಕೊಂಡಿದ್ದಾನೆ. ಅಲ್ಲಿದ್ದ ವ್ಯಕ್ತಿಯೊಬ್ಬರ ಮೂಲಕ ಫೋಟೋ ತೆಗೆಸಿಕೊಂಡು ತಾಯಿಗೆ ಫೋಟೋ ಕಳುಹಿಸಿದ್ದಾನೆ.
ಆನಂತರ ಯಾರ ಸಂಪರ್ಕಕ್ಕೂ ಸಿಗದೇ ಬಾಲಕ ಡಿಮನ್ ರಾಜ್ ನಾಪತ್ತೆಯಾಗಿದ್ದಾನೆ. ವಿದ್ಯಾರ್ಥಿ ನಾಪತ್ತೆಯಾಗಿರುವ ಬಗ್ಗೆ ನಂದಿನಿ ಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಪೋಷಕರು, ಪೊಲೀಸರು ಹುಡುಕಾಟ ನಡೆಸಿದ್ದಾರೆ.