ನವದೆಹಲಿ: ಕಾಶ್ಮೀರ ಕೃಷಿ ವಿವಿಯಲ್ಲಿ ಓದುತ್ತಿದ್ದ ಕರ್ನಾಟಕದ 13 ವಿದ್ಯಾರ್ಥಿಗಳು ವಾಪಸ್ ಬಂದಿದ್ದಾರೆ. ಪಹಲ್ಗಾಮ್ ನಲ್ಲಿ ಪ್ರವಾಸಿಗರ ಮೇಲೆ ಉಗ್ರರ ದಾಳಿಯ ನಂತರ ಭಾರತ ಪಾಕಿಸ್ತಾನ ಗಡಿ ಭಾಗದಲ್ಲಿ ಉದ್ವಿಗ್ನ ಸ್ಥಿತಿ ಉಂಟಾಗಿದೆ. ಈ ನಡುವೆ ಕಾಶ್ಮೀರದಲ್ಲಿ ಸಿಲುಕಿಕೊಂಡಿದ್ದ ರಾಜ್ಯದ 13 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ವಾಪಸ್ ಕರೆತರಲಾಗಿದೆ.
ಕರ್ನಾಟಕ ಮೂಲದ ಒಟ್ಟು 13 ವಿದ್ಯಾರ್ಥಿಗಳು ದೆಹಲಿಗೆ ವಾಪಸ್ ಬಂದಿದ್ದಾರೆ. ವಿದ್ಯಾರ್ಥಿಗಳು ಕ್ಷೇಮವಾಗಿ ಬರಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ವ್ಯವಸ್ಥೆ ಮಾಡಿದ್ದಾರೆ. ಶ್ರೀನಗರದಲ್ಲಿ ವ್ಯಾಸಂಗ ಮಾಡುತ್ತಿದ್ದ ಕರ್ನಾಟಕದ 13 ವಿದ್ಯಾರ್ಥಿಗಳು ದೆಹಲಿಯ ಕರ್ನಾಟಕ ಭವನ -2ರಲ್ಲಿ ಉಳಿಯಲು ವ್ಯವಸ್ಥೆ ಮಾಡಲಾಗಿದೆ. ತಡರಾತ್ರಿ ರೈಲಿನ ಮೂಲಕ ವಿದ್ಯಾರ್ಥಿಗಳು ದೆಹಲಿಗೆ ತಲುಪಿದ್ದಾರೆ. ಇಂದು ದೆಹಲಿಯಿಂದ ತಾಯ್ನಾಡಿಗೆ ವಾಪಸ್ಸಾಗಲಿದ್ದಾರೆ. ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ವಿದ್ಯಾರ್ಥಿಗಳು ಧನ್ಯವಾದ ತಿಳಿಸಿದ್ದಾರೆ.
ನಿನ್ನೆ ಚನ್ನಪಟ್ಟಣದ ಕಾರ್ಯಕ್ರಮದಲ್ಲಿ, ತೊಗಚಗೆರೆ ಗ್ರಾಮದ ಜೆಡಿಎಸ್ ಮುಖಂಡರು ತಮ್ಮ ಮಗನಾದ ಹರ್ಷಿತ್ ಕಾಶ್ಮೀರದ ಕೃಷಿ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದು, ಯುದ್ಧ ಭೀತಿಯಿಂದ ಅವರನ್ನು ಕರ್ನಾಟಕಕ್ಕೆ ಹಿಂತಿರುಗಿಸಲು ನನ್ನ ಸಹಾಯ ಕೋರಿದರು.
— Nikhil Kumar (@Nikhil_Kumar_k) May 10, 2025
ನಾನು ಈ ವಿಷಯವನ್ನು ಕೇಂದ್ರ ಸಚಿವರಾದ ಮಾನ್ಯ ಕುಮಾರಣ್ಣನವರ ಗಮನಕ್ಕೆ ತಂದ ನಂತರ, ಅವರು ಕೂಡಲೇ… pic.twitter.com/gXXzyxD2QI