BREAKING : ವಿಧಾನಸೌಧದ ಮುಂದೆಯೇ ರಾಬರಿ : ಹಲ್ಲೆ ನಡೆಸಿ ಹಣ-ಮೊಬೈಲ್ ದೋಚಿ ದುಷ್ಕರ್ಮಿಗಳು ಪರಾರಿ.!

ಬೆಂಗಳೂರು : ವಿಧಾನಸೌಧದ ಮುಂದೆಯೇ ದುಷ್ಕರ್ಮಿಗಳು ದರೋಡೆ ನಡೆಸಿರುವ ಘಟನೆ ಬೆಳಕಿಗೆ ಬಂದಿದ್ದು, ಹಲ್ಲೆ ನಡೆಸಿ ಹಣ, ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.

ಐದರಿಂದ ಆರು ಜನ ಆರೋಪಿಗಳು ಡಕಾಯಿತಿ ನಡೆಸಿದ್ದು, ಹಲ್ಲೆ ಮಾಡಿ ಮೂವತ್ತು ಸಾವಿರದ ಮೊಬೈಲ್ ಫೋನ್ ಹಾಗೂ. 9182 ಹಣ ದರೋಡೆ ಮಾಡಿದ್ದಾರೆ. ಅಣ್ಣ ತಮ್ಮ ಇಬ್ಬರೂ ಸಿನಿಮಾ ನೋಡಿ ವಿಧಾನ ಸೌಧ ಲೈಟಿಂಗ್ ನೋಡಲು ಬಂದಿದ್ದರು. ಈ ವೇಳೆ 5-6 ಮಂದಿ ದುಷ್ಕರ್ಮಿಗಳ ಗುಂಪು ಇಬ್ಬರ ಮೇಲೆ ಹಲ್ಲೆ ನಡೆಸಿ ಹಣ , ಮೊಬೈಲ್ ದೋಚಿ ಪರಾರಿಯಾಗಿದ್ದಾರೆ.

ವಿಧಾನಸೌಧದ ಸುತ್ತಾಮುತ್ತಾ ಯಾವಾಗಲೂ ಭಾರಿ ಭದ್ರತೆ ಇರುತ್ತದೆ. ಆದರೆ ಇಲ್ಲೇ ದರೋಡೆ ನಡೆದಿರುವುದು ಆತಂಕಾರಿ ವಿಷಯವಾಗಿದೆ. ಈ ಸಂಬಂಧ ವಿಧಾನಸೌಧ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. ಕಳೆದ ಭಾನುವಾರ ರಾತ್ರಿ ಈ ಘಟನೆ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read