ರಾಮನಗರ : ರಾಮನಗರದಲ್ಲಿ ಘೋರ ದುರಂತ ಸಂಭವಿಸಿದ್ದು, ವೈಜಿ ಗುಡ್ಡ ಡ್ಯಾಂ ನೋಡಲು ಹೋಗಿದ್ದ ಮೂವರು ಯುವತಿಯರು ಮುಳುಗಿ ಸಾವನ್ನಪ್ಪಿರುವ ದಾರುಣ ಘಟನೆ ರಾಮನಗರ ಜಿಲ್ಲೆಯ ಮಾಗಡಿ ತಾಲೂಕಿನಲ್ಲಿ ನಡೆದಿದೆ.
ಮೃತರನ್ನು ಬೆಂಗಳೂರು ಮೂಲದ ರಾಘವಿ (18), ಮಧುಮಿತ (20) ಹಾಗೂ ರಮ್ಯಾ (22) ಎಂದು ಗುರುತಿಸಲಾಗಿದೆ. ಈ ವೇಳೆ ಉಳಿದವರು ಆಕೆಯ ರಕ್ಷಣೆಗೆಂದು ನೀರಿಗೆ ಇಳಿದಿದ್ದಾರೆ. ಘಟನೆಯಲ್ಲಿ ಮೂವರು ಯುವತಿಯರು ನೀರುಪಾಲಾಗಿದ್ದಾರೆ. ಉಳಿದವರನ್ನು ಓರ್ವ ಯುವಕ ರಕ್ಷಿಸಿದ್ದಾನೆ.
ಬೆಂಗಳೂರಿನ ಸಂಬಂಧಿಕರ ಮನೆಗೆಂದು ಬಂದಿದ್ದ ಯುವತಿಯರು ವೈ ಜಿ ಗುಡ್ಡ ಜಲಾಶಯ ನೋಡಲೆಂದು ಹೋಗಿದ್ದರು. ಈ ವೇಳೆ ದುರ್ಘಟನೆ ಸಂಭವಿಸಿದೆ. ಮಕ್ಕಳನ್ನು ಕಳೆದುಕೊಂಡು ಪೋಷಕರ ಆಕ್ರಂದನ ಹೇಳತೀರದಾಗಿದೆ.
You Might Also Like
TAGGED:ವೈಜಿಗುಡ್ಡ