ಬೆಂಗಳೂರು : ಬೆಂಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಮರಗಳ ಬುಡಕ್ಕೆ ಹಾಕಿದ್ದ ಕಾಂಕ್ರೀಟ್ ತೆರವುಗೊಳಿಸುವಂತೆ ಸಚಿವ ಈಶ್ವರ್ ಖಂಡ್ರೆ ಮಹತ್ವದ ಆದೇಶ ಹೊರಡಿಸಿದ್ದಾರೆ.
ಬೆಂಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಮರದ ಬುಡಕ್ಕೆ ಕಾಂಕ್ರೀಟ್ ಹಾಕಲಾಗಿತ್ತು. ಇದಕ್ಕೆ ಭಾರಿ ವಿರೋಧ ವ್ಯಕ್ತವಾಗಿದ್ದವು. ಕಾಂಕ್ರೀಟ್ ತೆರವುಗೊಳಿಸುವಂತೆ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆ ಈ ಕೂಡಲೇ ಮರದ ಬುಡಕ್ಕೆ ಕಾಂಕ್ರೀಟ್ ಅಥವಾ ಟೈಲ್ಸ್ ಏನೇ ಹಾಕಿದ್ದರೂ ತೆರವುಗೊಳಿಸುವಂತೆ , ಮರಗಳ ಸುತ್ತ ಒಂದು ಮೀಟರ್ ಕಾಂಕ್ರೀಟ್ ಹಾಕುವಂತಿಲ್ಲ ಎಂದು ಸಚಿವರು ಆದೇಶ ಹೊರಡಿಸಿದ್ದಾರೆ.