ಶಿವಮೊಗ್ಗ : ಜುಲೈ 14 ರಂದು ದೇಶದ 2 ನೇ ಅತಿ ಉದ್ದದ ಸಿಗಂದೂರು ಕೇಬಲ್ ಸೇತುವೆ ಲೋಕಾರ್ಪಣೆಗೊಳ್ಳಲಿದೆ ಎಂದು ಸಂಸದ ಬಿ.ವೈ ರಾಘವೇಂದ್ರ ಮಾಹಿತಿ ನೀಡಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ ಸಿಗಂದೂರು ಸೇತುವೆಗೆ ಜುಲೈ 14 ರಂದು ಚಾಲನೆ ಸಿಗಲಿದ್ದು, ಕೇಂದ್ರ ಸಚಿವ ನಿತಿನ್ ಗಡ್ಕರಿ, ಸಂಸದ ಪ್ರಹ್ಲಾದ್ ಜೋಶಿ ಭಾಗಿಯಾಗಲಿದ್ದಾರೆ. ಈ ಸೇತುವೆಗೆ ಸಿಗಂಧೂರು ಚೌಡೇಶ್ವರಿ ದೇವಿ ಹೆಸರು ಇಡಲು ರಾಜ್ಯ ಸರ್ಕಾರ ಶಿಫಾರಸು ಮಾಡಲಿ ಎಂದು ಆಗ್ರಹಿಸಿದರು.
ಬರೋಬ್ಬರಿ 470 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣವಾಗಿರುವ ದೇಶದ 2 ನೇ ಅತಿ ಉದ್ದದ ಕೇಬಲ್ ಆಧಾರಿತ ಸೇತುವೆ ಇದಾಗಿದೆ. ಈ ಸೇತುವೆಯ ಕಾಮಗಾರಿ 2020 ರ ಡಿಸೆಂಬರ್ ನಲ್ಲಿ ಆರಂಭವಾಗಿತ್ತು.
ಸಿಗಂದೂರು’ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಇರುವ ಪ್ರಸಿದ್ಧ ಯಾತ್ರಾಸ್ಥಳ. ಚೌಡೇಶ್ವರಿ ಅಮ್ಮನವರು ಇಲ್ಲಿ ನೆಲೆನಿಂತು ಭಕ್ತರನ್ನು ಹರಸುತ್ತಾಳೆ. ತಾಯಿಯನ್ನು ಸಿಗಂದೂರೇಶ್ವರಿ ಎಂದೂ ಕರೆಯುತ್ತಾರೆ. ಸಿಗಂಧೂರಿಗೆ ಬರುವ ಪ್ರವಾಸಿಗರ ಪ್ರಮುಖ ಆಕರ್ಷಣೆ ಇಲ್ಲಿನ ಲಾಂಚ್. ಸದ್ಯ, ಸಿಗಂದೂರು ಸೇತುವೆ ಕಾಮಗಾರಿ ಬಹುತೇಕ ಮುಕ್ತಾಯಗೊಂಡಿದ್ದು, ಸದ್ಯದಲ್ಲೇ ಪ್ರವಾಸಿಗರಿಗೆ ಈ ಸೇತುವೆ ಮುಕ್ತವಾಗಲಿದೆ.. ಸೇತುವೆಯ ಲೋಡ್ ಟೆಸ್ಟಿಂಗ್ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಎಲ್ಲರ ಗಮನ ಸೆಳೆದಿದೆ.