ಇತ್ತೀಚಿನ ಭಾರತ -ಪಾಕಿಸ್ತಾನ ಸಂಘರ್ಷದ ಸಂದರ್ಭದಲ್ಲಿ ಪಾಕಿಸ್ತಾನ ಪರವಾಗಿ ನಿಂತು ಅದಕ್ಕೆ ಸೇನಾ ನೆರವು ನೀಡಿದ್ದ ಮಿತ್ರ ದ್ರೋಹಿ ಟರ್ಕಿ ವಿರುದ್ಧ ಭಾರತ ಬಹಿಷ್ಕಾರದ ಅಭಿಯಾನ ಆರಂಭಿಸಿ ಬಿಸಿ ಮುಟ್ಟಿಸಿದೆ.
ಟರ್ಕಿಯ ಉತ್ಪನ್ನಗಳು, ಪ್ರವಾಸೋದ್ಯಮ, ಕಂಪನಿಗಳು, ಮಾಧ್ಯಮಗಳ ಮೇಲೆ ಭಾರತ ನಿರ್ಬಂಧ ಹೇರಿದೆ. ಟರ್ಕಿಯಲ್ಲಿ ಚಲನಚಿತ್ರ ಚಿತ್ರೀಕರಣಕ್ಕೂ ಭಾರತೀಯರು ಹಿಂದೇಟು ಹಾಕಿದ್ದಾರೆ. ಇಂತಹ ಸಂದರ್ಭದಲ್ಲೇ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದೆ.
5.2 ತೀವ್ರತೆಯ ಭೂಕಂಪವು ಮಧ್ಯ ಟರ್ಕಿಯನ್ನು ಅಪ್ಪಳಿಸಿದೆ
ಗುರುವಾರ 5.2 ತೀವ್ರತೆಯ ಭೂಕಂಪವು ಮಧ್ಯ ಟರ್ಕಿಯನ್ನು ಅಪ್ಪಳಿಸಿದೆ ಎಂದು ಸೌರಮಂಡಲದ ರೇಖಾಗಣಿತ ಸಮೀಕ್ಷೆ ವರದಿ ಮಾಡಿದೆ. X ನಲ್ಲಿನ ಪೋಸ್ಟ್ನಲ್ಲಿ SSGEOS “#ಭೂಕಂಪ ಪರಿಷ್ಕೃತವಾಗಿದೆ – M 5.2 ಮಧ್ಯ ಟರ್ಕಿ” ಎಂದು ಬರೆದಿದೆ.
ಗುರುವಾರ ಸಂಜೆ ಟರ್ಕಿಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 5.2 ತೀವ್ರತೆ ದಾಖಲಾಗಿದೆ. ಟರ್ಕಿಯ ಮಧ್ಯ ಅನಾಟೋಲಿಯಾ ಪ್ರದೇಶದ ಕೊನ್ಯಾ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದೆ ಎಂದು ವರದಿಯಾಗಿದೆ.
ಈ ಹಿಂದೆ ಪ್ರಬಲ ಭೂಕಂಪದಿಂದ ನಲುಗಿದ್ದ ಟರ್ಕಿಗೆ ಭಾರತ ಸಹಾಯ ಹಸ್ತ ಚಾಚಿತ್ತು. ಆದರೆ, ನೆರವನ್ನು ಮರೆತ ಮಿತ್ರದ್ರೋಹಿ ಟರ್ಕಿ ಭಾರತದ ವಿರುದ್ಧ ನಿಂತ ಪಾಕಿಸ್ತಾನಕ್ಕೆ ಸೇನಾ ನೆರವು ನೀಡಿದೆ.