ಬೆಳಗಾವಿ : ಬೆಳಗಾವಿಯಲ್ಲಿ ನೆತ್ತರು ಹರಿದಿದ್ದು, ಹಾಡಹಗಲೇ ಸಂತೆಯಲ್ಲಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ಪಟ್ಟಣದಲ್ಲಿ ಈ ಭೀಕರ ಕೊಲೆ ನಡೆದಿದೆ, ಸಂತೆಯಲ್ಲಿ ಜನರ ಎದುರೇ ಮಾರಕಾಸ್ತ್ರಗಳಿಂದ ಕೊಚ್ಚಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಬೈಕ್ ನಲ್ಲಿ ಹೋಗುತ್ತಿದ್ದ 25 ವರ್ಷದ ಮಲಿಕ್ ಕಿಲ್ಲೇಧಾರ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿದ್ದು, ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವುದೇ ಭಯವಿಲ್ಲದೇ ಹಾಡಹಗಲೇ ನಡೆದ ಯುವಕನ ಬರ್ಬರ ಕೊಲೆ ಕಂಡು ಜನರು ಬೆಚ್ಚಿ ಬಿದ್ದಿದ್ದಾರೆ.
You Might Also Like
TAGGED:ಬೆಳಗಾವಿ