ಬೆಂಗಳೂರು : ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ತಾಂತ್ರಿಕ ಸಮಸ್ಯೆ ಉಂಟಾಗಿದ್ದು, 1 ಗಂಟೆ ಸಂಚಾರದಲ್ಲಿ ವ್ಯತ್ಯಯವಾಗಿದೆ.
ಚಲ್ಲಘಟ್ಟ –ವೈಟ್ ಫೀಲ್ಡ್ ಮಾರ್ಗದಲ್ಲಿ ಕಳೆದ 1 ಗಂಟೆಯಿಂದ ಸಂಚಾರ ವ್ಯತ್ಯಯವಾಗಿದೆ. ತಾಂತ್ರಿಕ ಸಮಸ್ಯೆಯಿಂದ ರೈಲು ಕೆಟ್ಟು ನಿಂತಿದ್ದು, ರೈಲು ಸ್ಥಳಾಂತರಗೊಂಡ ಬಳಿಕ ಸಂಚಾರ ಸುಗಮವಾಗಲಿದೆ ಎಂದು ಬಿಎಂಆರ್ ಸಿಎಲ್ ತಿಳಿಸಿದೆ.
ವಿಜಯನಗರ ಹೊಸಹಳ್ಳಿ ನಿಲ್ದಾಣಗಳ ನಡುವೆ ವ್ಯತ್ಯಯ ಉಂಟಾಗಿದೆ. ಚಲ್ಲಘಟ್ಟದಿಂದ ಹೊರಟ ಮೆಟ್ರೋ ರೈಲು 9.20 ರ ಸುಮಾರಿಗೆ ರಾಜರಾಜೇಶ್ವರಿ ಮೆಟ್ರೋ ನಿಲ್ದಾಣದಲ್ಲಿ ನಿಂತಿದ್ದು, ಮುಂದೆ ಚಲಿಸಿಲ್ಲ. ಸುಮಾರು 10 ನಿಮಿಷಗಳಿಂದಲೂ ನಿಲ್ದಾಣದಲ್ಲಿಯೇ ನಿಂತಿದೆ ಎಂದು ಪ್ರಯಾಣಿಕರು ತಿಳಿಸಿದ್ದಾರೆ. ರೈಲು ನಿಲ್ಲಲು ಕಾರಣ ತಿಳಿದು ಬಂದಿಲ್ಲ.
