ಬೆಂಗಳೂರು : ಬೆಂಗಳೂರಿನಲ್ಲಿ ಬ್ಯಾಂಕ್ ಮ್ಯಾನೇಜರ್ ಒಬ್ಬರು ಅನುಮಾನಾಸ್ಪವಾಗಿ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಸ್ನೇಹಿತರ ಜೊತೆ ಪಬ್ ಗೆ ಹೋಗಿದ್ದ ಮೇಘರಾಜ್ ಎಂಬುವವರು ಶವವಾಗಿ ಪತ್ತೆಯಾಗಿದ್ದಾರೆ.
ಪಬ್ ನಲ್ಲಿ ಸ್ನೇಹಿತರ ಜೊತೆ ಪಾರ್ಟಿ ಮಾಡಿದ ಮೇಘರಾಜ್ ನಂತರ ವಾಶ್ ರೂಂಗೆ ಹೋಗಿದ್ದಾರೆ. ತುಂಬಾ ಹೊತ್ತಾದರೂ ಮೇಘರಾಜ್ ವಾಪಸ್ ಆಗದ ಕಾರಣ ಸ್ನೇಹಿತರು ಶೌಚಾಲಯದ ಬಳಿ ಹೋದಾಗ ಅಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಬೆಂಗಳೂರಿನ ಆರ್ ಆರ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.