ಬೆಂಗಳೂರು: ಬೆಂಗಳೂರಿನಲ್ಲಿ ಪತಿಯಿಂದಲೇ ಪತ್ನಿಯ ಕೊಲೆ ನಡೆದಿದೆ. ಪತ್ನಿ ಕಲೈವಾಣಿ ಅವರನ್ನು ಕೊಂದ ರಮೇಶ್ ಪೊಲೀಸರಿಗೆ ಶರಣಾಗಿದ್ದಾನೆ. ಬೆಂಗಳೂರಿನ ಬಾಣಸವಾಡಿಯ ಜಯಲಕ್ಷ್ಮಿ ಶಾಲೆಯ ಸಮೀಪ ಘಟನೆ ನಡೆದಿದೆ.
ರಮೇಶ್ ಗೆ ಕಲೈವಾಣಿ ಎರಡನೇ ಪತ್ನಿಯಾಗಿದ್ದು, ಮೊದಲ ಪತ್ನಿಯಿಂದ ಬೇರೆಯಾಗಿ ಕಲೈವಾಣಿ ಜೊತೆಗೆ ರಮೇಶ್ ವಾಸವಾಗಿದ್ದ. ನಿನ್ನೆ ಮೊದಲ ಪತ್ನಿ ಮತ್ತು ಮಕ್ಕಳನ್ನು ಭೇಟಿಯಾಗಿದ್ದ. ಈ ವಿಚಾರಕ್ಕೆ ಎರಡನೇ ಪತ್ನಿ ಕಲೈವಾಣಿ ಮತ್ತು ರಮೇಶನ ನಡುವೆ ಜಗಳವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಕಲೈವಾಣಿಯನ್ನು ರಮೇಶ್ ಹತ್ಯೆ ಮಾಡಿದ್ದಾನೆ. ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ. ಬಾಣಸವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.