BREAKING: ಬಿಜೆಪಿ ಸಭೆಯಲ್ಲಿ ಗದ್ದಲ-ಕೋಲಾಹಲ; ಕಾರ್ಯಕರ್ತರಿಗೆ ಗದರಿದ ಯಡಿಯೂರಪ್ಪ

ಬೆಂಗಳೂರು: ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಬಿಜೆಪಿ ಸಭೆಯಲ್ಲಿ ಕಾರ್ಯಕರ್ತರ ನಡುವೆ ಗದ್ದಲ-ಕೋಲಾಹಲ ನಡೆದಿದೆ.

ಸಭೆಯಲ್ಲಿ ಮಾತನಾಡಿದ ಶಾಸಕ ಮುನಿರಾಜು ಪಕ್ಷಕ್ಕೆ ಚೂರಿ ಹಾಕಿದವರನ್ನು ಪಕ್ಷದಿಂದ ಹೊರ ಹಾಕಬೇಕು ಎಂದು ಹೇಳುತ್ತಿದ್ದಿದ್ದಂತೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೀವು ಮಾಡಿದರೆ ನಡೆಯುತ್ತಾ ಎಂದು ಕೆಲ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಇದೇ ವೇಳೆ ಕಾರ್ಯಕರ್ತರ ನಡುವೆ ಗದ್ದಲ ಆರಂಭವಾಗಿದೆ.

ಕೆಲ ಬಿಜೆಪಿ ನಾಯಕರು ಕಾರ್ಯಕರ್ತರನ್ನು ಸಮಾಧಾನ ಪಡಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ. ಈ ವೇಳೆ ಎದ್ದು ನಿಂತ ಮಾಜಿ ಸಿಎಂ ಯಡಿಯೂರಪ್ಪ ನೀವು ಸುಮನೇ ಕುಳಿತುಕೊಳ್ಳದಿದ್ದರೆ ನಾನು ಹೊರಹೋಗುತ್ತೇನೆ. ನಿಮ್ಮ ಅನಿಸಿಕೆ, ಅಭಿಪ್ರಾಯಗಳು ಏನೇ ಇದ್ದರು ಬಂದು ಮಾತನಾಡಿ ನಾನು ಇಲ್ಲೇ ಇರುತ್ತೇನೆ. ಇದು ಬಿಜೆಪಿ ಸಭೆ. ಅನಗತ್ಯವಾಗಿ ಗದ್ದಲ ಬೇಡ. ನಾಳೆ ಇದೇ ವಿಚಾರ ಮಾಧ್ಯಮಗಳಲ್ಲಿ ಬರುತ್ತದೆ ಎಂದು ಗದರಿದರು. ಎಲ್ಲರೂ ಸುಮ್ಮನೇ ಕುಳಿತುಕೊಳ್ಳಿ ಎಂದು ಮನವಿ ಮಾಡುತ್ತಿದ್ದೇನೆ, ಸುಮ್ಮನಿರಿ ಎಂದು ಹೇಳುತ್ತಿದ್ದಂತೆ ಕಾರ್ಯಕರ್ತರು ತಣ್ಣಗಾದ ಪ್ರಸಂಗ ನಡೆದಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read