BREAKING: ಬಿಜೆಪಿಯ ಪ್ರೀತಮ್ ಗೌಡಗೆ ಬಿಗ್ ಶಾಕ್; ಹಾಸನದಲ್ಲಿ JDS ನ ಸ್ವರೂಪ್ ಜಯಭೇರಿ

ಹಾಸನ: ತೀವ್ರ ಜಿದ್ದಾಜಿದ್ದಿನ ಕ್ಷೇತ್ರ ಎಂದೇ ಪರಿಗಣಿತವಾಗಿದ್ದ ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಪ್ರೀತಮ್ ಗೌಡಗೆ ಜೆಡಿಎಸ್ ಬಿಗ್ ಶಾಕ್ ನೀಡಿದೆ.

ಹಾಸನ ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಸ್ವರೂಪ್ ಗೌಡ ಜಯಭೇರಿ ಬಾರಿಸಿದ್ದಾರೆ. ಬಿಜೆಪಿಯ ಪ್ರೀತಮ್ ಗೌಡಗೆ ಮುಖಭಂಗವಾಗಿದೆ. ಈ ಮೂಲಕ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಪತ್ನಿ ಭವಾನಿ ರೇವಣ್ಣ ಪಟ್ಟು ಗೆದ್ದಂತಾಗಿದೆ.

ಪ್ರೀತಮ್ ಗೌಡ ವಿರುದ್ಧ ಸ್ವರೂಪ್ 8 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದು, ಹಾಸನ ಜೆಡಿಎಸ್ ನಲ್ಲಿ ಸಂಭ್ರಮ ಮನೆ ಮಾಡಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read