ಬೆಂಗಳೂರು : ಅಭಿನಯ ಸರಸ್ವತಿ, ಬಹುಭಾಷಾ ಹಿರಿಯ ನಟಿ ಬಿ.ಸರೋಜಾದೇವಿ (87) ವಿಧಿವಶರಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಬೆಂಗಳೂರಿನ ತಮ್ಮ ನಿವಾಸದಲ್ಲಿ ಅವರು ಮೃತಪಟ್ಟಿದ್ದಾರೆ.
ಬಿ. ಸರೋಜದೇವಿ ಕನ್ನಡದ ಹಿರಿಯ ಚಲನಚಿತ್ರ ತಾರೆಯರಲ್ಲಿ ಒಬ್ಬರು. ಒಂದು ಕಾಲದಲ್ಲಿ ಕನ್ನಡ ಬೆಳ್ಳಿತೆರೆಯಲ್ಲಿ ಬೆಳಗಿದ ಅಭಿನೇತ್ರಿ. ಕಿತ್ತೂರು ಚೆನ್ನಮ್ಮ ಚಿತ್ರದಲ್ಲಿ ಹೂಂಕರಿಸಿದ್ದ ಬಿ.ಸರೋಜಾದೇವಿ ಬಭ್ರುವಾಹನ ಚಿತ್ರದಲ್ಲಿ ಚಿತ್ರಾಂಗದೆಯಾಗಿದ್ದರು.
ಕನ್ನಡ, ತಮಿಳು, ತೆಲುಗು ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಭಾರತೀಯ ನಟಿ. ಅವರು ಏಳು ದಶಕಗಳಲ್ಲಿ ಸುಮಾರು ೨೦೦ ಚಿತ್ರಗಳಲ್ಲಿ ನಟಿಸಿದ್ದಾರೆ. ಆಕೆಯನ್ನು ಕನ್ನಡದಲ್ಲಿ “ಅಭಿನಯ ಸರಸ್ವತಿ” (ನಟನೆಯ ಸರಸ್ವತಿ) ಮತ್ತು ತಮಿಳಿನಲ್ಲಿ “ಕನ್ನಡತು ಪೈಂಗಿಲಿ” (ಕನ್ನಡದ ಗಿಳಿ) ಎಂಬ ಉಪನಾಮಗಳಿಂದ ಕರೆಯಲಾಗುತ್ತದೆ. ಅವರು ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಟಿಯರಲ್ಲಿ ಒಬ್ಬರು.
ಅಭಿನಯಿಸಿದ ಚಿತ್ರಗಳು
• ಕಿತ್ತೂರುರಾಣಿ ಚೆನ್ನಮ್ಮ,
• ಅಮರಶಿಲ್ಪಿ ಜಕಣಾಚಾರಿ,
• ಕಥಾಸಾಗರ,
• ಬಬ್ರುವಾಹನ,
• ಭಾಗ್ಯವಂತರು,
• ಆಷಾಡಭೂತಿ,
• ಶ್ರೀರಾಮಪೂಜಾ,
• ಕಚ ದೇವಯಾನಿ,
• ರತ್ನಗಿರಿ ರಹಸ್ಯ,
• ಕೋಕಿಲವಾಣಿ,
• ಸ್ಕೂಲ್ಮಾಸ್ಟರ್,
• ಪಂಚರತ್ನ,
• ಲಕ್ಷ್ಮೀಸರಸ್ವತಿ,
• ಚಿಂತಾಮಣಿ,
• ಭೂಕೈಲಾಸ,
• ಅಣ್ಣತಂಗಿ,
• ಜಗಜ್ಯೋತಿ ಬಸವೇಶ್ವರ,
• ಕಿತ್ತೂರುಚೆನ್ನಮ್ಮ,
• ದೇವಸುಂದರಿ,
• ವಿಜಯನಗರದ ವೀರಪುತ್ರ,
• ಮಲ್ಲಮ್ಮನ ಪವಾಡ,
• ಶ್ರೀಕೃಷ್ಣರುಕ್ಮಿಣಿ ಸತ್ಯಭಾಮ,
• ಪೂರ್ಣಿಮಾ,
• ಗೃಹಿಣಿ,
• ಪಾಪಪುಣ್ಯ,
• ಸಹಧರ್ಮಿಣಿ,
• ಶ್ರೀನಿವಾಸಕಲ್ಯಾಣ,
• ಚಾಮುಂಡೇಶ್ವರಿ ಮಹಿಮೆ,
• ಚಿರಂಜೀವಿ,
• ಶನಿಪ್ರಭಾವ ಮೊದಲಾದ ಚಿತ್ರಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದರು.
ರಾಜ್ಯ ಪ್ರಶಸ್ತಿಗಳು
• ೨೦೦೯ – ತಮಿಳುನಾಡು ಸರ್ಕಾರದಿಂದ ಕಲೈಮಾಮಣಿ ಚಿತ್ರಕ್ಕೆ ಜೀವಮಾನ ಸಾಧನೆ ಪ್ರಶಸ್ತಿ
• ೨೦೦೯ – ಕರ್ನಾಟಕ ಸರ್ಕಾರದಿಂದ ಡಾ.ರಾಜ್ಕುಮಾರ್ ಜೀವಮಾನ ಸಾಧನೆ ಪ್ರಶಸ್ತಿ
• ೨೦೦೯ – ಎರಡನೇ ಬಾರಿಗೆ ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
• ೨೦೦೧ – ಆಂಧ್ರ ಪ್ರದೇಶ ಸರ್ಕಾರದಿಂದ NTR ರಾಷ್ಟ್ರೀಯ ಪ್ರಶಸ್ತಿ
• ೧೯೯೩ – ತಮಿಳುನಾಡು ಸರ್ಕಾರದ ಎಂಜಿಆರ್ ಪ್ರಶಸ್ತಿ
• ೧೯೮೮ – ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿ
• ೧೯೮೦ – ಕರ್ನಾಟಕ ರಾಜ್ಯದಿಂದ ಅಭಿನಂದನ-ಕಾಂಚನ ಮಾಲಾ ಪ್ರಶಸ್ತಿ
• ೧೯೬೯ – ಕುಲ ವಿಳಕ್ಕು ಚಿತ್ರಕ್ಕೆ ಅತ್ಯುತ್ತಮ ನಟಿಯಾಗಿ ತಮಿಳುನಾಡು ರಾಜ್ಯ ಚಲನಚಿತ್ರ ಪ್ರಶಸ್ತಿ
• ೧೯೬೫ – ಕರ್ನಾಟಕದಿಂದ ಅಭಿನಯ ಸರಸ್ವತಿ ಗೌರವ