BREAKING: ಬಳಕೆದಾರರಿಗೆ ಮತ್ತೆ ಕೈಕೊಟ್ಟ ಟ್ವಿಟ್ಟರ್; ವಿಶ್ವದಾದ್ಯಂತ ಹಲವು ಗಂಟೆಗಳ ಕಾಲ ವ್ಯತ್ಯಯ

ಸಾಮಾಜಿಕ ಜಾಲತಾಣ ಟ್ವಿಟರ್ ಮತ್ತೆ ವ್ಯತ್ಯಯವಾಗಿದೆ. ವಿಶ್ವದಾದ್ಯಂತ ಕೆಲ ಬಳಕೆದಾರರು ಮೈಕ್ರೋ ಬ್ಲಾಗಿಂಗ್ ಫ್ಲ್ಯಾಟ್ ಫಾರ್ಮ್ ಬಳಸಲು ಸಮಸ್ಯೆ ಎದುರಿಸಿದ್ದಾರೆ.

ಈ ಕುರಿತಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಟ್ವಿಟರ್ ಬಳಕೆದಾರರು, ತಮಗಾದ ನಿರಾಸೆಯನ್ನು ವ್ಯಕ್ತಪಡಿಸಿದ್ದಾರೆ.

ಈ ಹಿಂದೆಯೂ ಹಲವು ಬಾರಿ ಟ್ವಿಟರ್ ಸೇವೆಯಲ್ಲಿ ವ್ಯತ್ಯಯವಾಗಿದ್ದು, ತಾಂತ್ರಿಕ ದೋಷವೇ ಇದಕ್ಕೆ ಕಾರಣ ಎಂದು ಹೇಳಲಾಗಿದೆ.

ಈ ಬಾರಿ ಟ್ವಿಟರ್ ಸೇವೆ ವ್ಯತ್ಯಯವಾಗಿರುವುದಕ್ಕೆ ಸಂಸ್ಥೆ ಈವರೆಗೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಎಲ್ಲಾ ಬಳಕೆದಾರರು ಈ ಸಮಸ್ಯೆಯನ್ನು ಎದುರಿಸಿಲ್ಲ ಎಂದು ಹೇಳಲಾಗಿದೆ.

https://twitter.com/disclosetv/status/1627014836529016832?ref_src=twsrc%5Etfw%7Ctwcamp%5Etweetembed%7Ctwterm%5E1627014836529016832%7Ctwgr%5E3dd556ccdd660001123186d4a538c9f247354589%7Ctwcon%5Es1_&ref_url=http%3A%2F%2Fm.dailyhunt.in%2Fnews%2Findia%2Fenglish%2Flatestly-epaper-dh91bfc27fb6cf46a58e6b6df12965bd61%2Ftwitterdownagainglobaloutageastwitterisnotworkingforusersworldwide-newsid-n472984884

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read