BREAKING : ಪರಿಶಿಷ್ಟ ಜಾತಿಯ ‘ಒಳಮೀಸಲಾತಿ ಸಮೀಕ್ಷೆ’ ನಡೆಸಲು ಗಣತಿದಾರರ ನೇಮಕ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಪರಿಶಿಷ್ಟ ಜಾತಿಯ ಒಳಮೀಸಲಾತಿಗೆ ಸಮೀಕ್ಷೆ ನಡೆಸಲು ಗಣತಿದಾರರ ನೇಮಕ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.

ಮೇಲಿನ ವಿಷಯ ಹಾಗೂ ಉಲ್ಲೇಖಕ್ಕೆ ಸಂಬಂಧಿಸಿದಂತೆ, ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿಯನ್ನು ಜಾರಿಗೊಳಿಸುವ ಮಾನ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿಗಳಾದ ಶ್ರೀ ಹೆಚ್ ಎನ್ ನಾಗಮೋಹನ ದಾಸ್ ಇವರ ಅಧ್ಯಕ್ಷತೆಯಲ್ಲಿ ರಚಿಸಲಾಗಿರುವ ಏಕ ಸದಸ್ಯ ಆಯೋಗವು ದಿನಾಂಖ:27-03-2025 ರಂದು ಸನ್ಮಾನ್ಯ ಮುಖ್ಯ ಮಂತ್ರಿಗಳಿಗೆ ಮಧ್ಯಂತರ ವರದಿಯನ್ನು ಸಲ್ಲಿಸಿದ್ದು, ಸದರಿ ವರದಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಪರಿಶಿಷ್ಟ ಜಾತಿಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸದಾಗಿ ಸಮೀಕ್ಷೆ ನಡೆಸಿ ದತ್ತಾಂಶವನ್ನು ಸಂಗ್ರಹಿಸಬೇಕಾಗಿದ್ದು, ಅದರಂತೆ ಸಮೀಕ್ಷೆ ನಡೆಸಲು ಶಿಫಾರಸ್ಸು ಮಾಡಿರುತ್ತದೆ. ಸದರಿ ಸಮೀಕ್ಷೆಯನ್ನು ನಡೆಸಲು ಅಗತ್ಯವಿರುವ ಶಿಕ್ಷಕರನ್ನು ಪಡೆಯುವ ಬಗ್ಗೆ ಶಿಕ್ಷಣ ಇಲಾಖೆಯಿಂದ ಸುತ್ತೋಲೆ ಹೊರಡಿಸುವಂತೆ ನಿರ್ದೇಶನವಿರುತ್ತದೆ. ಸದರಿ ಸಮೀಕ್ಷೆ ನಡೆಸಲು ಜಿಲ್ಲಾವಾರು ಒಟ್ಟು 29330 ಗಣತಿದಾರರ (Enumerators) ಅವಶ್ಯವಿದ್ದು ಹಾಗೂ ಶೇ 20% (ಅಂದಾಜು 6000) ಗಣತಿದಾರರನ್ನು (Enumerators) ಹೆಚ್ಚುವರಿಯಾಗಿ ಕಾಯ್ದಿರಿಸಿದ ಸಿಬ್ಬಂದಿಗಳನ್ನು ನಿಯೋಜಿಸಲು ಕೋರಿದ್ದು, ಜನಸಂಖ್ಯಾವಾರು ಪ್ರತಿ ಜಿಲ್ಲೆಗೆ ಸಮೀಕ್ಷಾ ಕಾರ್ಯಕ್ಕೆ ಅಗತ್ಯವಿರುವ ಶಿಕ್ಷಕರನ್ನು 2:20-04-2025 ರಿಂದ 20-05-2025 ರವರೆಗೆ (ತರಬೇತಿಯ ಅವಧಿಯನ್ನೊಳಗೊಂಡಂತೆ) ನಿಯೋಜಿಸಲು ಅಗತ್ಯ ಕ್ರಮವಹಿಸುವಂತೆ ಕೋರಿರುತ್ತಾರೆ.

ದಿನಾಂಕ: 16-04-2025 ರಂದು ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಮತ್ತು ಅಭಿವದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ನಡೆದ ಸಭೆಯ ನಡವಳಿಯನ್ವಯ ಸದರಿ ಸಮೀಕ್ಷೆಯನ್ನು Booth level officers model ಮೂಲಕ ನಡೆಸಬೇಕೆಂದು ನಿರ್ಣವಾಗಿರುತ್ತದೆ ಮತ್ತು ಕರ್ನಾಟಕ ರಾಜ್ಯದಲ್ಲಿ ಗುರುತಿಸಿರುವ ಒಟ್ಟಾರೆ 58932 Booth level officers ಇರುತ್ತಾರೆಂದು ತಿಳಿಸಿದ್ದು, ಸಮೀಕ್ಷೆಗೆ ಅಗತ್ಯವಿರುವ ಜಿಲ್ಲಾವಾರು Enumerators ಗಳ ಸಂಖ್ಯಾಪಟ್ಟಿಯನ್ನು ಈ ಪತ್ರಕ್ಕೆ ಲಗತ್ತಿಸಿ ಕಳುಹಿಸಿದೆ. ಸದರಿ ಸಭೆಯಲ್ಲಿ ನಿರ್ಣಯವಾದಂತೆ ಸಮೀಕ್ಷೆಗೆ Enumerators ಗಳನ್ನಾಗಿ ಶಿಕ್ಷಕರನ್ನು ಮಾತ್ರ ನೇಮಿಸುವಂತೆ ಹಾಗೂ ಆಶಾ ಕಾರ್ಯಕರ್ತರು/ಅಗನವಾಡಿ ಶಿಕ್ಷಕರನ್ನು ಈ ಸಮೀಕ್ಷಾ ಕಾರ್ಯಕ್ಕೆ ನಿಯೋಜಿಸಬಾರದೆಂದು ನಿರ್ದೇಶನವಿರುತ್ತದೆ. ಸಮೀಕ್ಷಾ ಕಾರ್ಯಕ್ಕೆ ಒಟ್ಟಾರೆ 58932 ಶಿಕ್ಷಕರನ್ನು Booth level officers ಗಳಾಗಿ ಗುರುತಿಸಲು, ಅದರೊಂದಿಗೆ ಶೇ 10 ರಷ್ಟು ಶಿಕ್ಷಕರನ್ನು ಹೆಚ್ಚುವರಿಯಾಗಿ ಕಾಯ್ದಿರಿಸಲು ಮತ್ತು 10 ರಿಂದ 12 Enumerators ಗಳ ಸಮೀಕ್ಷೆಯನ್ನು ನಡೆಸಿ ಅವರು ಸಂಗ್ರಹಿಸಿದ ಮಾಹಿತಿಯನ್ನು ಪರಿಶೀಲಿಸಲು ಒಬ್ಬ Supervisor ನ್ನು ನೇಮಿಸಬೇಕಾಗಿದ್ದು, Supervisor ಗಳಾಗಿ ಶಾಲೆಯ ಮುಖ್ಯ ಶಿಕ್ಷರನ್ನು ನೇಮಿಸಲು ತಿಳಿಸಲಾಗಿರುತ್ತದೆ. ಶಾಲಾ ಶಿಕ್ಷಣ ಇಲಾಖೆಯಿಂದ Supervisor /Enumerators ಗಳನ್ನು ಗುರುತಿಸಿ ಸಲ್ಲಿಸಿದ ನಂತರ ಜಿಲ್ಲಾ ಮಟ್ಟದಲ್ಲಿ ಸಂಬಂಧಪಟ್ಟ ಜಿಲ್ಲಾಧಿಕಾರಿಗಳು ನೇಮಕಾತಿ ಆದೇಶ ಹೊರಡಿಸಲಿರುವರೆಂದು ಉಲ್ಲೇಖದ ಪ್ರಕಾರ ಆದೇಶವಾಗಿರುತ್ತದೆ. (ಪ್ರತಿ ಲಗತ್ತಿಸಿದೆ)

ಪ್ರಯುಕ್ತ ಉಲ್ಲೇಖಿತ ಆದೇಶವನ್ನು ಈ ಪತ್ರಕ್ಕೆ ಲಗತ್ತಿಸಿ ಕಳುಹಿಸುತ್ತಾ, ಉಲ್ಲೇಖಿತ ಆದೇಶದಲ್ಲಿ ಸೂಚಿಸಿರುವಂತೆ, ತಮ್ಮ ಜಿಲ್ಲೆಗೆ ಸಂಬಂಧಿಸಿದಂತೆ ಅವಶ್ಯವಿರುವ ಗಣತಿದಾರರು ( Enumerators), 10% ಹೆಚ್ಚುವರಿ (ಕಾಯ್ದಿರಿಸಿದ) ಗಣತಿದಾರರು ( Enumerators ) ಹಾಗೂ 10-12 ಗಣತಿದಾರರಿಗೊಬ್ಬರಂತೆ Supervisor ಗಳನ್ನು ಗುರುತಿಸಿ ಸದರ ಮಾಹಿತಿಯನ್ನು ಈ ಪತ್ರಕ್ಕೆ ಲಗತ್ತಿಸಿರುವ ನಮೂನೆಯಲ್ಲಿ ತುರ್ತಾಗಿ ಸಿದ್ಧಪಡಿಸಿ ತಮ್ಮ ಜಿಲ್ಲೆಯ ಮಾನ್ಯ ಜಿಲ್ಲಾಧಿಕಾರಿಗಳ ಕಛೇರಿಗೆ ಸಲ್ಲಿಸಲು ಹಾಗೂ ಸದರ ಮಾಹಿತಿಯ ಒಂದು ಪ್ರತಿಯನ್ನು ಈ ಕಛೇರಿಗೆ ಸಲ್ಲಿಸಲು ಸೂಚಿಸಿದೆ. ಈ ಕುರಿತು ಯಾವುದೇ ರೀತಿಯ ವಿಳಂಬ ನೀತಿ ಅನುಸರಿಸದೇ, ನೆನಪೋಲೆಗಳಿಗೆ ಅವಕಾಶ ನೀಡದೇ ಸದರಿ ಮಾಹಿತಿಯನ್ನು ತುರ್ತಾಗಿ ಸಲ್ಲಿಸಲು ಸೂಚಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read