ನ್ಯಾಷನಲ್ ಹೆರಾಲ್ಡ್ ಕೇಸ್ ನಲ್ಲಿ ಡಿಕೆ ಬ್ರದರ್ಸ್ ಗೆ ಸಂಕಷ್ಟ ಎದುರಾಗಿದ್ದು, E.D ಅಧಿಕಾರಿಗಳ ಚಾರ್ಜ್ ಶೀಟ್ ನಲ್ಲಿ ಇಬ್ಬರ ಹೆಸರು ಉಲ್ಲೇಖವಾಗಿದೆ.
ಯಂಗ್ ಇಂಡಿಯನ್ ಲಿಮಿಟೆಡ್ ಗೆ ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಡಿಕೆ ಸುರೇಶ್ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ. ಇಬ್ಬರು 25 ಲಕ್ಷ ದೇಣಿಗೆ ನೀಡಿದ್ದಾರೆ ಎನ್ನಲಾಗಿದೆ.
ಇಡಿ ದಾಖಲಿಸಿರುವ ಚಾರ್ಚ್ ಶೀಟ್ ನಲ್ಲಿ ಡಿಕೆ ಶಿವಕುಮಾರ್, ಡಿಕೆ ಸುರೇಶ್ ಹಾಗೂ ಸಿಎಂ ರೇವಂತ್ ರೆಡ್ಡಿ ಹೆಸರು ಕೂಡ ಉಲ್ಲೇಖವಾಗಿದೆ.
ಡಿಕೆ ಶಿವಕುಮಾರ್ ಹೇಳಿದ್ದೇನು..?
ಈ ಬಗ್ಗೆ ವಿಜಯಪುರದಲ್ಲಿ ಮಾತನಾಡಿದ ಡಿಸಿಎಂ ಡಿಕೆ ಶಿವಕುಮಾರ್ ಹೌದು, ನಾವು ಸಂಪಾದಿಸಿದ ಆಸ್ತಿಯಿಂದ ದೇಣಿಗೆ ಕೊಟ್ಟಿದ್ದೇವೆ, ನಾನು 25 ಲಕ್ಷ, ನನ್ನ ತಮ್ಮ 25 ಲಕ್ಷ ಕೊಟ್ಟಿದ್ದೇವೆ. ಅದರಲ್ಲಿ ತಪ್ಪೇನು..? ನಾವು ರಾಜಾರೋಷವಾಗಿ ಕೊಟ್ಟಿದ್ದೇವೆ. ಇದರಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
You Might Also Like
TAGGED:ಡಿ.ಕೆ ಬ್ರದರ್ಸ್