ಬೆಂಗಳೂರು : ನಿವೃತ್ತ ಡಿಜಿ & ಐಜಿಪಿ ಓಂಪ್ರಕಾಶ್ ರಾವ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದು, ಮಗಳಿಗೆ ಕ್ಲೀನ್ ಚಿಟ್ ನೀಡಿದೆ. ಬೆಂಗಳೂರಿನ 1 ನೇ ಎಸಿಎಂಎಂ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.
ಪ್ರಕರಣದ ತನಿಖೆ ನಡೆಸಿದ ಸಿಸಿಬಿ ಪೊಲೀಸರು ಸಂಪೂರ್ಣ ವರದಿಯನ್ನು ಸಿದ್ದಪಡಿಸಿ 1150 ಪುಟಗಳ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ಪುತ್ರಿ ಕೃತಿಕಾ ಪಾತ್ರ ಕಂಡು ಬರದ ಹಿನ್ನೆಲೆ ಕೃತಿಕಾಗೆ ಕ್ಲೀನ್ ಚಿಟ್ ನೀಡಲಾಗಿದೆ. ಕೊಲೆ ನಡೆದಾಗ ಕೃತಿಕಾ ಮೇಲಿನ ಮಹಡಿಯಲ್ಲಿದ್ದರು.
ಓಂ ಪ್ರಕಾಶ್ ಪತ್ನಿ ಪಲ್ಲವಿ ವಿರುದ್ಧ ಸಿಸಿಬಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ರಕ್ತದ ಕಲೆಗಳು, ಚಾಕುವಿನ ಮೇಲೆ ಇದ್ದ ಫಿಂಗರ್ ಪ್ರಿಂಟ್ , ಗೋಡೆ ಮೇಲಿನ ರಕ್ತದ ಕಲೆಗಳು ಸೇರಿದಂತೆ ಸಾಕಷ್ಟು ವೈಜ್ಞಾನಿಕ ಸಾಕ್ಷಗಳನ್ನು ಸಿಸಿಬಿ ಸಂಗ್ರಹಿಸಿತ್ತು. ತನಿಖೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ಸಿಸಿಬಿ ಚಾರ್ಜ್ ಶೀಟ್ ಸಲ್ಲಿಸಿದೆ. ಏ.20 ರಂದು ಓಂಪ್ರಕಾಶ್ ರಾವ್ ಕೊಲೆ ನಡೆದಿತ್ತು. ಪತ್ನಿ ಪಲ್ಲವಿ ಅವರೇ ಪತಿ ಓಂಪ್ರಕಾಶ್ ಅವರನ್ನು ಕೊಲೆ ಮಾಡಿದ್ದರು. ಬೆಂಗಳೂರಿನ ಹೆಚ್ ಎಸ್ ಆರ್ ಲೇಔಟ್ ನಲ್ಲಿ ಕೊಲೆ ನಡೆದಿತ್ತು.