ರಾಯಚೂರು: ನಿರಂತರ ಮಳೆಯಿಂದ ಮನೆ ಗೋಡೆ ಕುಸಿದು ಮಹಿಳೆ ಸಾವನ್ನಪ್ಪಿದ ಘಟನೆ ರಾಯಚೂರು ಜಿಲ್ಲೆ ಮಾನ್ವಿ ತಾಲೂಕಿನ ಕಾತರಕಿ ಗ್ರಾಮದಲ್ಲಿ ನಡೆದಿದೆ.
ಕಾತರಕಿ ಗ್ರಾಮದ ನಿವಾಸಿ ತಾಯಮ್ಮ(38) ಮೃತಪಟ್ಟವರು ಎಂದು ಹೇಳಲಾಗಿದೆ. ಘಟನೆಯಲ್ಲಿ ಮೃತರ ಸಂಬಂಧಿ 16 ವರ್ಷದ ಬಾಲಕಿ ಸಮಿತ್ರಾ ಗಾಯಗೊಂಡಿದ್ದಾರೆ.
ಮಾನ್ವಿ ಪಟ್ಟಣದ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗಿದೆ. ನಿರಂತರ ಮಳೆಯಿಂದಾಗಿ ತಾಯಮ್ಮ ಅವರ ಹಳೆ ಮನೆ ಗೋಡೆ ತೇವಗೊಂಡು ಶಿಥಿಲವಾಗಿತ್ತು. ಮನೆ ಗೋಡೆ ಕುಸಿತಗೊಂಡು ತಾಯಮ್ಮ ಸಾವನ್ನಪ್ಪಿದ್ದು, ಬಾಲಕಿ ಗಾಯಗೊಂಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.