ಧರ್ಮಸ್ಥಳ : ಧರ್ಮಸ್ಥಳದಲ್ಲಿ ಅಸ್ಥಿಪಂಜರ ಪತ್ತೆ ಕೇಸ್ ಗೆ ಸ್ಪೋಟಕ ಟ್ವಿಸ್ಟ್ ಸಿಕ್ಕಿದ್ದು, ದೂರುದಾರನ ಪರ ಹೇಳಿಕೆ ನೀಡಲು 6 ಸ್ಥಳೀಯರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ.
ಹೌದು, ಧರ್ಮಸ್ಥಳದಲ್ಲಿ ನೂರಾರು ಶವ ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಎಸ್ ಐ ಟಿ ತನಿಖೆ ನಡೆಸುತ್ತಿದ್ದು, ಅನಾಮಿಕ ವ್ಯಕ್ತಿಗೆ ಸಾಥ್ ನೀಡಲು ದೂರುದಾರನ ಪರ ಹೇಳಿಕೆ ನೀಡಲು 6 ಸ್ಥಳೀಯರು ಮುಂದಾಗಿದ್ದಾರೆ ಎಂದು ಹೇಳಲಾಗಿದೆ. ಈ ಬಗ್ಗೆ ಎಸ್ ಐ ಟಿ ಅಧಿಕಾರಿಗಳು ಪ್ರತಿಕ್ರಿಯೆ ನೀಡುವವರೆಗೂ ಇದು ಅಧಿಕೃತ ಮಾಹಿತಿ ಎಂದು ಹೇಳುವುದಕ್ಕೆ ಆಗಲ್ಲ.
ಪ್ರಕರಣದ ಮತ್ತೋರ್ವ ಪ್ರಮುಖ ಬೆಳವಣಿಗೆ ಅಂದರೆ ಧರ್ಮಸ್ಥಳದಲ್ಲಿ 15 ವರ್ಷಗಳ ಹಿಂದೆ ಬಾಲಕಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಪ್ರಕರಣವನ್ನು ಎಸ್ ಐ ಟಿಗೆ ಹಸ್ತಾಂತರ ಮಾಡಲಾಗಿದೆ.ದೂರುದಾರ ಟಿ. ಜಯಂತ್ ಎನ್ನುವ ಹೊಸ ಸಾಕ್ಷಿದಾರ ಬಾಲಕಿಯ ಶವವನ್ನು ಹೂತಿರುವುದನ್ನು ಕಣ್ಣಾರೆ ನೋಡಿದ್ದೇನೆ ಎಂದು ಸಾಕ್ಷಿ ಹೇಳಿದ್ದರು. ಅಲ್ಲದೇ ದೂರು ದಾಖಲಿಸಿದ್ದರು. ಈ ಪ್ರಕರಣದ ತನಿಖೆಯನ್ನು ಎಸ್ ಐ ಟಿಗೆ ಹಸ್ತಾಂತರಿಸಲಾಗಿದೆ.ಧರ್ಮಸ್ಥಳದಲ್ಲಿ ಮೃತದೇಹಗಳನ್ನು ಹೂತು ಹಾಕಲಾಗಿದೆ ಎನ್ನುವ ದೂರಿಗೆ ಸಂಬಂಧಿಸಿದಂತೆ ಮತ್ತೊಬ್ಬ ವ್ಯಕ್ತಿಯ ಎಸ್ಐಟಿ ಎದುರು ಆಗಮಿಸಿ ದೂರು ನೀಡಿದ್ದರು. ಜಯಂತ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.