ಕಲಬುರಗಿ: ಅನೈತಿಕ ಸಂಬಂಧ ಶಂಕೆಯಿಂದ ಪತ್ನಿ, ಆಕೆಯ ಪ್ರಿಯಕರನನ್ನು ಪತಿಯ ಹತ್ಯೆ ಮಾಡಿದ ಘಟನೆ ಕಲಬುರಗಿ ಜಿಲ್ಲೆ ಆಳಂದ ತಾಲೂಕಿನ ಮಾದನಹಿಪ್ಪರಗಾ ಗ್ರಾಮದಲ್ಲಿ ಘಟನೆ ನಡೆದಿದೆ.
ಪ್ರಿಯಕರ ಕಾಜಪ್ಪ(22), ಪತ್ನಿ ಸೃಷ್ಟಿ(22) ಅವರನ್ನು ಪತಿ ಶ್ರೀಮಂತ್ ಕೊಲೆ ಮಾಡಿದ್ದಾನೆ. ಪತ್ನಿಯ ಜೊತೆಗೆ ಕಾಜಪ್ಪ ಇದ್ದುದನ್ನು ಕಂಡು ಕೋಪಗೊಂಡ ಶ್ರೀಮಂತ್ ಕೊಂದು ಹಾಕಿದ್ದಾನೆ. ಇಬ್ಬರನ್ನು ಕೊಂದು ಪೋಲಿಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಎರಡು ವರ್ಷಗಳ ಹಿಂದೆಯಷ್ಟೇ ಸೃಷ್ಟಿಯನ್ನು ಶ್ರೀಮಂತ್ ಮದುವೆಯಾಗಿದ್ದ. ಅವಿವಾಹಿತ ಯುವಕನೊಂದಿಗೆ ಸೃಷ್ಟಿ ಅನೈತಿಕ ಸಂಬಂಧ ಶಂಕೆಯಿಂದ ಜಗಳವಾಡಿದ್ದ. ಇಬ್ಬರೂ ಜೊತೆಯಾಗಿದ್ದಾಗಲೇ ಕೊಲೆ ಮಾಡಿದ್ದಾನೆ. ಸ್ಥಳಕ್ಕೆ ಮಾದನಹಿಪ್ಪರಗಾ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹೆಚ್ಚಿನ ವಿವರ ನಿರೀಕ್ಷಿಸಲಾಗಿದೆ.