ಡಿಜಿಟಲ್ ಡೆಸ್ಕ್ : ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಮನ ಮಾಡುವ ಕಾರ್ಯಾಚರಣೆ ಮುಂದುವರೆದಿದ್ದು, ಈ ಸಂದರ್ಭದಲ್ಲಿ ಓರ್ವ ಭಾರತೀಯ ಸೇನೆಯ ಯೋಧ ಹುತಾತ್ಮನಾಗಿದ್ದಾರೆ.
ಜಮ್ಮು-ಕಾಶ್ಮೀರದ ಚತ್ರೂವಿನ ಸಿಂಗ್ಪೋರಾ ಪ್ರದೇಶದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವಿನ ಗುಂಡಿನ ಚಕಮಕಿ ಎರಡನೇ ದಿನವೂ ಮುಂದುವರೆದಿದೆ. ಕಿಶ್ತ್ವಾರ್ನ ಚತ್ರೂವಿನ ಸಿಂಗ್ಪೋರಾ ಪ್ರದೇಶದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಸಮಯದಲ್ಲಿ ಓರ್ವ ಯೋಧ ಹುತಾತ್ಮನಾಗಿದ್ದಾರೆ.
2 ಪ್ಯಾರಾ, 11 ರಾಷ್ಟ್ರೀಯ ರೈಫಲ್ಸ್, 7 ಅಸ್ಸಾಂ ರೈಫಲ್ಸ್ ಮತ್ತು ಜಮ್ಮು ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣೆ ಗುಂಪು (SOG) ಸೇರಿದಂತೆ ಜಂಟಿ ಪಡೆಗಳು ಗುರುವಾರ ಬೆಳಗ್ಗೆ ಸಿಂಗ್ಪೋರಾ ಚತ್ರೂ ಪ್ರದೇಶದಲ್ಲಿ ಜೈಶ್-ಎ-ಮೊಹಮ್ಮದ್ (JeM) ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದವು. ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕರು, ಅವರ ಭೂಗತ ಕಾರ್ಯಕರ್ತರು ಮತ್ತು ಅವರಿಗೆ ನೆರವು ನೀಡುವವರ ವಿರುದ್ಧ ಬೃಹತ್ ಮಟ್ಟದ ಕಾರ್ಯಾಚರಣೆ ನಡೆಯುತ್ತಿದೆ.
#WATCH | Kishtwar, J&K | Encounter between Security Forces and terrorists in the Singhpora area of Chatroo continues for the second day. One jawan lost his life in the line of duty during the ongoing operation in the Singhpora area of Chatroo in Kishtwar.
— ANI (@ANI) May 23, 2025
(Visuals deferred by… pic.twitter.com/lKFucEkHVQ
#WATCH | J&K: State Investigation Agency (SIA) continues its raids at multiple locations in Poonch. A house allegedly linked to a terrorist is being raided by the SIA. Details awaited. pic.twitter.com/Xreh7e5iFu
— ANI (@ANI) May 23, 2025