ಕೊಪ್ಪಳ: ಲಾರಿಯಿಂದ ಪೈಪ್ ಇಳಿಸುವಾಗ ಇಬ್ಬರು ಕಾರ್ಮಿಕರು ಸಾವನ್ನಪ್ಪಿದ ಘಟನೆ ಕೊಪ್ಪಳ ಜಿಲ್ಲೆಯ ಕುಷ್ಟಗಿ ಇಂಡಸ್ಟ್ರಿಯಲ್ ಏರಿಯಾದಲ್ಲಿ ನಡೆದಿದೆ.
ದೊಂಗರಪ್ಪ ಇಟ್ಲಾಪುರ(18), ಶಿವಪ್ಪ ಗಡದ(28) ಮೃತಪಟ್ಟವರು ಎಂದು ಹೇಳಲಾಗಿದೆ. ದೊಂಗರಪ್ಪ ಇಳಕಲ್ ತಾಲೂಕಿನ ತೊಂಡಿಹಾಳ ಗ್ರಾಮದ ನಿವಾಸಿಯಾಗಿದ್ದಾರೆ. ಶಿವಪ್ಪ ಗಡದ ಕನಕಗಿರಿ ತಾಲೂಕಿನ ಓಬಳಬಂಡಿ ಗ್ರಾಮದ ನಿವಾಸಿಯಾಗಿದ್ದಾರೆ.
ಆಲಮಟ್ಟಿಯಿಂದ ಕುಷ್ಟಗಿಗೆ ನೀರು ಪೂರೈಸುವ ಅಮೃತ ಯೋಜನೆ ಕಾಮಗಾರಿಗಾಗಿ ಲಾರಿಯಲ್ಲಿ ಪೈಪ್ ಗಳನ್ನು ತರಿಸಲಾಗಿತ್ತು. ಅವುಗಳನ್ನು ಇಳಿಸುವಾಗ ಪೈಪ್ ಗಳ ಅಡಿಯಲ್ಲಿ ಸಿಲುಕಿ ಕೂಲಿ ಕಾರ್ಮಿಕರು ಸಾವನ್ನಪ್ಪಿದ್ದಾರೆ. ವಿಜಯಪುರ ಮೂಲದ ರಾಜ್ ರಾಥೋಡ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳು ಕಾರ್ಮಿಕನನ್ನು ಕುಷ್ಟಗಿ ತಾಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ