ಚಂಡೀಗಢ: ಪಂಜಾಬ್‌ನ ಮಾನ್ಸಾ ಜಿಲ್ಲೆಯಲ್ಲಿ ಕಾರು ಕ್ಯಾಂಟರ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪಂಜಾಬಿ ಗಾಯಕ ಹರ್ಮನ್ ಸಿಧು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
‘ಪೇಪರ್ ತೆ ಪಾಯರ್’ ಹಾಡಿಗೆ ಹೆಸರುವಾಸಿಯಾದ 36 ವರ್ಷದ ಗಾಯಕ ಶುಕ್ರವಾರ ರಾತ್ರಿ ಮಾನ್ಸಾದ ತಮ್ಮ ಗ್ರಾಮವಾದ ಖಿಯಾಲಾ ಕಲಾನ್‌ಗೆ ಹಿಂತಿರುಗುತ್ತಿದ್ದಾಗ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.
ಟ್ರಕ್ ಚಾಲಕನನ್ನು ಬಂಧಿಸಲಾಗಿದ್ದು, ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2007 ರಲ್ಲಿ ಗಾಯಕಿ ಮಿಸ್ ಪೂಜಾ ಅವರೊಂದಿಗೆ ಯುಗಳ ಗೀತೆಯಾಗಿದ್ದ ‘ಪೇಪರ್ ತೆ ಪಾಯರ್’ ಹಾಡಿನೊಂದಿಗೆ ಸಿಧು ಖ್ಯಾತಿಗೆ ಏರಿದರು. ಅವರ ಇತರ ಹಾಡುಗಳಲ್ಲಿ ‘ಮೇಲಾ’, ‘ಸಾರಿ ರಾತ್ ಪರ್ಹ್ದಿ’, ‘ಥಾಕೇವನ್ ಜತ್ತನ್ ದಾ’ ಮತ್ತು ‘ಪೈ ಗಯಾ ಪಾಯರ್’ ಸೇರಿವೆ.
