ವಿಜಯಪುರ: ವಿಜಯಪುರ ತಾಲೂಕಿನ ಕನ್ನೂರು ಗ್ರಾಮದಲ್ಲಿ ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಲ್ಲಿನಿಂದ ಜಜ್ಜಿ ಇಬ್ಬರು ಯುವಕರನ್ನು ಕೊಲೆ ಮಾಡಲಾಗಿದೆ.
ಸಾಗರ ಬೆಳುಂಡಗಿ(2ಗ), ಇಸಾಕ್ ಖುರೇಶಿ(24) ಕೊಲೆಯಾದವರು ಎಂದು ಹೇಳಲಾಗಿದೆ. ಇಬ್ಬರನ್ನು ಕಲ್ಲಿನಿಂದ ಜಜ್ಜಿ ಕೊಲೆಗೈದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಯುವಕರಿಬ್ಬರನ್ನು ಕೊಲೆಗೈದಿರುವ ಸಂಶಯ ವ್ಯಕ್ತವಾಗಿದೆ.
ಎರಡು ವರ್ಷದ ಹಿಂದೆ ಗ್ರಾಮದ ಈರಣ್ಣಗೌಡನ ಮೇಲೆ ಕೊಲೆಯಾದ ಸಾಗರ್ ಮತ್ತು ಇಸಾಕ್ ಖುರೇಶಿ ಹಲ್ಲೆ ನಡೆಸಿದ್ದರು. ಕೆಲವು ದಿನಗಳ ಹಿಂದೆ ಚಿಕಿತ್ಸೆ ಫಲಿಸದೇ ಈರಣ್ಣ ಗೌಡ ಮೃತಪಟ್ಟಿದ್ದ. ಇದೇ ದ್ವೇಷದ ಕಾರಣಕ್ಕೆ ಇಬ್ಬರನ್ನು ಕೊಲೆ ಮಾಡಿರುವ ಸಂಶಯ ವ್ಯಕ್ತವಾಗಿದೆ. ಸ್ಥಳಕ್ಕೆ ವಿಜಯಪುರ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.