ಬೆಂಗಳೂರು : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿಅತಿಥಿ ಉಪನ್ಯಾಸಕರ ನೇಮಕಾತಿಗೆ ರಾಜ್ಯ ಸರ್ಕಾರ ಅರ್ಜಿ ಆಹ್ವಾನಿಸಿದೆ.
2025-26ನೇ ಶೈಕ್ಷಣಿಕ ಸಾಲಿನಲ್ಲಿ ಇಲಾಖಾ ವ್ಯಾಪ್ತಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ (ಸರ್ಕಾರಿ ಸಂಸ್ಕೃತ ಹಾಗೂ ಚಿತ್ರಕಲಾ ಕಾಲೇಜುಗಳೂ ಒಳಗೊಂಡಂತೆ) ಖಾಯಂ ಉಪನ್ಯಾಸಕರಿಗೆ ಕಾರ್ಯಭಾರ ಹಂಚಿಕೆ ಮಾಡಿದ ನಂತರ ಉಳಿಕೆಯಾಗುವ ಬೋಧನಾ ಕಾರ್ಯಭಾರಕ್ಕನುಗುಣವಾಗಿ ಅತಿಥಿ ಉಪನ್ಯಾಸಕರನ್ನು (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ಅತಿಥಿ ಉಪನ್ಯಾಸಕರು ಸೇರಿದಂತೆ) ಉಲ್ಲೇಖ-(3) ರಲ್ಲಿ ಸರ್ಕಾರವು ನೀಡಿರುವ ಅನುಮತಿ ಮೇರೆಗೆ ಆನ್ಲೈನ್ ಕೌನ್ಸಿಲಿಂಗ್ ಮೂಲಕ ಆಯ್ಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ.
ಸರ್ಕಾರದ ಆದೇಶ ಸಂಖ್ಯೆ: ಇಡಿ 242 ಡಿಸಿಇ 2021, ದಿನಾಂಕ:14.01.2022 ರ ಕಂಡಿಕೆ (6) ರಲ್ಲಿ “ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರಿಗೆ ನಿಗಧಿತ ವಿದ್ಯಾರ್ಹತೆಯನ್ನು ಹೊಂದಲು 3 ವರ್ಷಗಳ ಕಾಲಾವಧಿ ನೀಡುವುದು, 3 ವರ್ಷಗಳ ನಂತರ ಯುಜಿಸಿ ನಿಗಧಿಪಡಿಸಿದ ವಿದ್ಯಾರ್ಹತೆ ಹೊಂದಿಲ್ಲದ ಅತಿಥಿ ಉಪನ್ಯಾಸಕರ ನೇಮಕಾತಿಯನ್ನು ಸಂಪೂರ್ಣವಾಗಿ ನಿರ್ಬಂಧಿಸುವುದು” ಎಂಬುದಾಗಿ ಆದೇಶಿಸಲಾಗಿರುತ್ತದೆ.
ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ಮಾನ್ಯ ಉಚ್ಚ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:23600/2023 ರಲ್ಲಿ ದಿನಾಂಕ:05.09.2024 ರಂದು ನೀಡಿದ ತೀರ್ಪಿನಲ್ಲಿ ಈ ಕೆಳಕಂಡಂತೆ ನಿರ್ದೇಶನ ನೀಡಿರುತ್ತದೆ.
i) This writ petition is allowed in part.
ii) The respondent Nos. 1 and 2 are directed to ensure complete compliance of the minimum qualification as prescribed by the UGC/respondent No.3 under the UGC Regulations, 2018 before selecting any candidates for the post of Guest Lecturer.
iii) It is made clear that in view of the order passed in W.P.No.3079/2022 and connected cases, the marks prescribed for past service for a maximum period of 16 years at the rate of 3 marks shall continue to be applied.
iv) It is also made clear that the respondent Nos. 1 and 2 shall not select any candidate who does not possess minimum qualification as prescribed in the UGC Regulations, 2018 and shall not select any candidate by placing a condition on him/her that he/she shall obtain requisite qualification namely NET/SLET/SET before 13.01.2025, unless he/she is awarded with a doctorate or is registered for a doctoral program prior to July 2009.
In view of the disposal of the petition, pending I.As., if any, do not survive for consideration and the same stand disposed off.
ಮುಂದುವರೆದು, ಮಾನ್ಯ ರಾಜ್ಯ ಉಚ್ಚ ನ್ಯಾಯಾಲಯವು ಉಲ್ಲೇಖ-(1) ರ ಪ್ರಕರಣದಲ್ಲಿ ನೀಡಿರುವ ತೀರ್ಪಿನಂತೆ ಅತಿಥಿ ಉಪನ್ಯಾಸಕರ ಆಯ್ಕೆ ಪುಕ್ರಿಯೆಯನ್ನು ಕೈಗೊಳ್ಳುವ ಸಲುವಾಗಿ ದಿನಾಂಕ:02.01.2025 ರ ಪ್ರಕಟಣೆಯನ್ನು ನೀಡಿದ್ದು, ಕರ್ತವ್ಯ ನಿರತರಾದ ಅತಿಥಿ ಉಪನ್ಯಾಸಕರು ರಾಜ್ಯ ಉಚ್ಚ ನ್ಯಾಯಾಲಯ, ಬೆಂಗಳೂರು ಇಲ್ಲಿ ರಿಟ್ ಅರ್ಜಿ ಸಂಖ್ಯೆ: 1398/2025 ಹಾಗೂ ಇತರ ಪ್ರಕರಣಗಳನ್ನು ದಾಖಲಿಸಿ, ದಿನಾಂಕ:02.01.2025 ರ ಪ್ರಕಟಣೆಯನ್ನು ವಜಾಗೊಳಿಸಿ, ತಮ್ಮನ್ನು ಸೇವೆಯಲ್ಲಿ ಮುಂದುವರೆಸುವಂತೆ ಕೋರಿದ ಹಿನ್ನೆಲೆಯಲ್ಲಿ ಮಾನ್ಯ ನ್ಯಾಯಾಲಯದಲ್ಲಿ ದಿನಾಂಕ:20.01.2025 ರಂದು ವಿಚಾರಣೆಗೆ ಬಂದಾಗ, ಮಾನ್ಯ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ: 1398/2025 ಮತ್ತು ಇತರೆ ರಿಟ್ ಅರ್ಜಿಗಳಲ್ಲಿ ನೀಡಿದ ಮಧ್ಯಂತರ ಆದೇಶದಂತೆ ಈ ಕಛೇರಿಯ ದಿನಾಂಕ:02.01.2025 ರ ಪ್ರಕಟಣೆಗೆ ತಡೆಯಾಜ್ಞೆ ನೀಡಲಾಗಿತ್ತು.
ತದನಂತರ, ಸದರಿ ರಿಟ್ ಅರ್ಜಿಗಳಲ್ಲಿ ನೀಡಿದ ತಡೆಯಾಜ್ಞೆಯನ್ನು ತೆರವುಗೊಳಿಸುವ ಸಲುವಾಗಿ ಮಾನ್ಯ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ದಿನಾಂಕ:22.04.2025 ರಂದು ಕರ್ತವ್ಯ ನಿರತ ರಿಟ್ ಅರ್ಜಿದಾರರಾದ ಅತಿಥಿ ಉಪನ್ಯಾಸಕರನ್ನು 10 ತಿಂಗಳ ಅವಧಿ ಮುಗಿಯುವವರೆಗೆ ಮುಂದುವರೆಸಿ ಹಾಗೂ ಅವಶ್ಯವಿರುವ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲು ಆದೇಶಿಸಲಾಯಿತು.
ಮುಂದುವರೆದು, ಮಾನ್ಯ ನ್ಯಾಯಾಲಯವು ರಿಟ್ ಅರ್ಜಿ ಸಂಖ್ಯೆ:13282/2025 ರಲ್ಲಿ ದಿನಾಂಕ:29.04.2025 ರಂದು ಅತಿಥಿ ಉಪನ್ಯಾಸಕರ ಪ್ರಕರಣವನ್ನು ಪರಿಶೀಲಿಸಿ, “the State Government is permitted to undertake counselling of 8561 posts of guest lecturers and permit the petitioners also to participate in the counselling process and if eligible, the petitioners shall be entitled to be appointed and continued as guest lecturers. It is made clear that until the present term of the petitioners as guest lectures expires, they shall not be dislodged and no appointment order shall be issued to any other selectee to replace the petitioners.” ಎಂಬುದಾಗಿ ನಿರ್ದೇಶನ ನೀಡಲಾಗಿರುತ್ತದೆ.
ಪ್ರಸ್ತುತ, ರಿಟ್ ಅರ್ಜಿ ಸಂಖ್ಯೆ:13282/2025 ರಲ್ಲಿ ದಿನಾಂಕ:29.04.2025 ರಂದು ನೀಡಿರುವ ಮಧ್ಯಂತರ ಆದೇಶದಂತೆ ಹಾಗೂ 2024-25ನೇ ಶೈಕ್ಷಣಿಕ ಸಾಲು ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು 2025-26ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಹಿತಾಸಕ್ತಿಯನ್ನು ಕಾಪಾಡುವ ನಿಟ್ಟಿನಲ್ಲಿ 2025-26ನೇ ಸಾಲಿಗೆ ಅತಿಥಿ ಉಪನ್ಯಾಸಕರ (ಅತಿಥಿ ಗ್ರಂಥಪಾಲಕರು ಹಾಗೂ ಅತಿಥಿ ದೈಹಿಕ ಶಿಕ್ಷಣ ಅತಿಥಿ ಉಪನ್ಯಾಸಕರು ಸೇರಿದಂತೆ) ಆಯ್ಕೆ ಪ್ರಕ್ರಿಯೆಯನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.
ಪ್ರಸ್ತುತ, ಜಾರಿಯಲ್ಲಿರುವ ಯು.ಜಿ.ಸಿ. 2018 ರ ಮಾರ್ಗಸೂಚಿಗಳಲ್ಲಿ ಸಹಾಯಕ ಪ್ರಾಧ್ಯಾಪಕರ ಹುದ್ದೆಗೆ ಸ್ನಾತಕೋತ್ತರ ಪದವಿಯಲ್ಲಿ ಶೇ 55 ಅಂಕಗಳೊಂದಿಗೆ (ಎಸ್ಸಿ/ಎಸ್ ಟಿ/ಓಬಿಸಿ/ ವಿಶೇಷ ಚೇತನರಿಗೆ ಶೇ.50) ಮತ್ತು ಎನ್ಇಟಿ/ಎಸ್ಎಲ್ಇಟಿ/ಕೆಸೆಟ್/ಪಿಹೆಚ್.ಡಿ ವಿದ್ಯಾರ್ಹತೆಯನ್ನು ನಿಗಧಿಪಡಿಸಲಾಗಿರುತ್ತದೆ.
ಪ್ರಸ್ತುತ 2025-26ನೇ ಶೈಕ್ಷಣಿಕ ಸಾಲಿಗೆ ಅತಿಥಿ ಉಪನ್ಯಾಸಕರ ಆಯ್ಕೆ ಪ್ರಕ್ರಿಯೆಯನ್ನು ಕೆಳಕಂಡ ಮಾನದಂಡಗಳನ್ವಯ ಅಭ್ಯರ್ಥಿಗಳ ವಿಷಯವಾರು ಮರಿಟ್ ಲಿಸ್ಟ್ (Merit List) ಅನ್ನು ತಯಾರಿಸಲಾಗುವುದು ಎಂದು ತಿಳಿಸಿದೆ.
ಹೆಚ್ಚಿನ ಮಾಹಿತಿಗಾಗಿ ಈ ಅಧಿಸೂಚನೆ ಓದಿ





