ನವದೆಹಲಿ : ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಬಿಬಿಸಿ ಮಾಡಿದ ಪ್ರಸಾರಕ್ಕೆ ಭಾರತ ಸರ್ಕಾರ ಸೋಮವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಕಾಶ್ಮೀರ ದಾಳಿಯ ನಂತರ ಪಾಕಿಸ್ತಾನವು ಭಾರತೀಯರಿಗೆ ವೀಸಾಗಳನ್ನು ಅಮಾನತುಗೊಳಿಸಿದೆ” ಎಂಬ ಶೀರ್ಷಿಕೆಯ ಲೇಖನದಲ್ಲಿ, ಬಿಬಿಸಿ ಭಯೋತ್ಪಾದಕ ದಾಳಿಯನ್ನು “ಬಂಡುಕೋರರ ದಾಳಿ” ಎಂದು ಉಲ್ಲೇಖಿಸಿದೆ.ಬಿಬಿಸಿಗೆ ಬರೆದ ಔಪಚಾರಿಕ ಪತ್ರದಲ್ಲಿ, ವಿದೇಶಾಂಗ ಸಚಿವಾಲಯವು ಬಿಬಿಸಿಯ ವರದಿಯನ್ನು ಮೇಲ್ವಿಚಾರಣೆ ಮಾಡುತ್ತದೆ ಎಂದು ಸರ್ಕಾರ ಹೇಳಿದೆ. ಬಿಬಿಸಿ ಭಾರತ ವಿರೋಧಿ ವರದಿ ಮಾಡಿದೆ. ಇನ್ನುಂದೆ ಹೀಗೆ ಆಗಬಾರದು ಎಂದು ಖಡಕ್ ಎಚ್ಚರಿಕೆ ನೀಡಿದೆ.
ಬಿಬಿಸಿಯ ಭಾರತದ ಮುಖ್ಯಸ್ಥ ಜಾಕಿ ಮಾರ್ಟಿನ್ ಅವರಿಗೆ ತನ್ನ ಕಳವಳವನ್ನು ತಿಳಿಸಿದ ಸರ್ಕಾರ, ಭಯೋತ್ಪಾದಕರ ಬದಲು “ಬಂಡುಕೋರ” ಎಂಬ ಪದವನ್ನು ಬಳಸುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿತು, ಭಯೋತ್ಪಾದಕರಿಂದ ಗುಂಡಿಕ್ಕಿ ಕೊಲ್ಲಲ್ಪಡುವ ಮೊದಲು ಜನರು ಕೇಳಿದ ಧರ್ಮವನ್ನು ವರದಿಯು ಕಡೆಗಣಿಸಿದೆ ಎಂದು ಹೇಳಿದೆ. ಭವಿಷ್ಯದಲ್ಲಿ ಸಂವೇದನೆಗಳನ್ನು ನೋಯಿಸದಂತೆ ಸರ್ಕಾರವು ಚಾನೆಲ್ ಗೆ ಸೂಚಿಸಿದೆ. ಭವಿಷ್ಯದಲ್ಲಿ ಭಯೋತ್ಪಾದಕ ದಾಳಿಯ ಬಗ್ಗೆ ಬಿಬಿಸಿ ವರದಿಯ ಮೇಲೆ ವಿದೇಶಾಂಗ ಸಚಿವಾಲಯ ಕಣ್ಣಿಡಲಿದೆ ಎಂದು ಸರ್ಕಾರ ಬಿಬಿಸಿಗೆ ತಿಳಿಸಿದೆ.