‘ಬೆಂಗಳೂರು : ಸ್ಯಾಂಡಲ್ ವುಡ್ ನಲ್ಲಿ ‘ಡಾರ್ಲಿಂಗ್ ಕೃಷ್ಣ’ ಅಭಿನಯದ ಬ್ರ್ಯಾಟ್ ಸಿನಿಮಾ ತೆರೆಗೆ ಬರಲು ಸಜ್ಜಾಗಿದ್ದು, ಸದ್ಯ ಸಿನಿಮಾದ ಟೀಸರ್ ರಿಲೀಸ್ ಆಗಿದೆ. ಡಾರ್ಲಿಂಗ್ ಕೃಷ್ಣ’ ಹುಟ್ಟುಹಬ್ಬಕ್ಕೆ ‘ಚಿತ್ರದ ಟೀಸರ್ ರಿಲೀಸ್ ಮಾಡಲಾಗಿದೆ.
ಸಿನಿಮಾದಲ್ಲಿ ಡಾರ್ಲಿಂಗ್ ಕೃಷ್ಣಗೆ ಜೋಡಿಯಾಗಿ ಮನೀಷಾ ಮತ್ತು ಇತರರು ನಟಿಸಿದ್ದಾರೆ. ಶಶಾಂಕ್ ನಿರ್ದೇಶನದ ಬ್ರ್ಯಾಟ್ ಚಿತ್ರ ಸಿನಿರಸಿಕರಲ್ಲಿ ಕುತೂಹಲ ಕೆರಳಿಸಿದೆ. ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಸಂಯೋಜಿಸಿದ್ದು, ಗಮನ ಸೆಳೆದಿದೆ.
ಬ್ರ್ಯಾಟ್ ಚಿತ್ರದಲ್ಲಿ ಕೃಷ್ಣ ಎರಡು ಶೇಡ್ ನಲ್ಲಿ ಕಾಣಿಸಿಕೊಂಡಿದ್ದಾರೆ. ಸಾಮಾನ್ಯ ಪೊಲೀಸ್ ಮಗನಾಗಿಯೇ ಕಾಣಿಸುತ್ತಾರೆ. ಮತ್ತೊಂದು ರೂಪದಲ್ಲಿ ದುಡ್ಡಿನ ಆಸೆ ಇರೋ ಕೇಡಿ ಹಾಗೆ ಅನಿಸುತ್ತಾರೆ. ಡಾರ್ಲಿಂಗ್ ಕೃಷ್ಣ ಅವರ ಜನ್ಮ ಹುಟ್ಟುಹಬ್ಬಕ್ಕೆ ಶಶಾಂಕ್ ಬ್ರ್ಯಾಟ್ ಟೀಸರ್ ರಿಲೀಸ್ ಮಾಡಿ ವಿಶ್ ಮಾಡಿದ್ದಾರೆ.
TAGGED:brat teaser