Watch | ಷೋ‌ ರೂಮ್​ನಿಂದ ಕಾರು ತರುವಾಗಲೇ ಆಯ್ತು ಎಡವಟ್ಟು….!

ಕಾರನ್ನು ಚಾಲನೆ ಮಾಡುವಾಗ ಹೆಚ್ಚಿನ ಕಾಳಜಿ ಅವಶ್ಯಕತೆ ಇದೆ. ಕೆಲವೊಂದು ನಿಯಮಗಳನ್ನು ಪಾಲನೆ ಮಾಡಬೇಕಿದೆ.

ಆದರೆ ಹೊಚ್ಚಹೊಸ ಫೋಕ್ಸ್‌ ವ್ಯಾಗನ್ ವರ್ಟಸ್​ ಖರೀದಿಸಿದ ಸಮಯದಲ್ಲಿ ಅದನ್ನು ಖರೀದಿ ಮಾಡಿದ ಮಾಲೀಕನಿಗೆ ಹಾನಿ ಅಷ್ಟಿಷ್ಟಲ್ಲ. ಕಾರನ್ನು ಖರೀದಿಸಿ ಷೋರೂಮ್​ನಿಂದ ತರುತ್ತಿರುವಾಗಲೇ ಭಾರಿ ಅಪಘಾತ ಸಂಭವಿಸಿದೆ. ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ಈ ದುರ್ಘಟನೆ ನಡೆದಿದೆ.

ಷೋ ರೂಂ, ರಸ್ತೆಗಿಂತ ಎತ್ತರದಲ್ಲಿದ್ದು, ಕಾರು ಚಾಲಕ ಹೊಸದಾಗಿ ಪಡೆದ ವಾಹನಗಳ ಅಳತೆಯನ್ನು ತಪ್ಪಾಗಿ ಲೆಕ್ಕ ಹಾಕಿದ್ದರಿಂದ ಈ ದುರ್ಘಟನೆ ನಡೆದಿದೆ. ಇದರ ಪರಿಣಾಮವಾಗಿ, ಕಾರು ಷೋ ರೂಮಿನ ಪ್ಲಾಟ್‌ಫಾರ್ಮ್‌ನಿಂದ ದೂರ ಹೋಗಿ ಅಪ್ಪಳಿಸಿದೆ. ಈ ಅಪಘಾತದಲ್ಲಿ ಚಾಲಕನ ಮೂಗಿಗೆ ಭಾರಿ ಗಾಯಗಳಾಗಿವೆ.

ಚಿತ್ರಗಳಲ್ಲಿ ಗೋಚರಿಸುವಂತೆ, ಈ ವರ್ಟಸ್‌ನ ಮುಂಭಾಗದ ಬಂಪರ್ ಹಾನಿಗೊಳಗಾಗಿದೆ, ಬಾನೆಟ್ ಕೂಡ ಜಜ್ಜಿ ಹೋಗಿದೆ. ಸೆಡಾನ್ ಒಟ್ಟು 6 ಟ್ರಿಮ್‌ಗಳಲ್ಲಿ ಮಾರಾಟದಲ್ಲಿದೆ, ಅವುಗಳೆಂದರೆ ಕಂಫರ್ಟ್‌ಲೈನ್, ಹೈಲೈನ್, ಹೈಲೈನ್ ಎಟಿ, ಟಾಪ್‌ಲೈನ್, ಟಾಪ್‌ಲೈನ್ ಎಟಿ, ಜಿಟಿ ಪ್ಲಸ್. ಈಗ ಕಾರು ಓಡಿಸುವ ಮುನ್ನವೇ ರಿಪೇರಿಗೆ ಹೋಗುವ ದುರಂತ ಸಂಭವಿಸಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read