ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಗುಡ್ ನ್ಯೂಸ್: ಹೃದಯ, ಶ್ವಾಸಕೋಶ, ಮೂಳೆ ಕಸಿ ಚಿಕಿತ್ಸೆ ಸೌಲಭ್ಯ

ಬೆಂಗಳೂರು: ಜೀವ ಸಾರ್ಥಕತೆ ಅಂಗಾಂಗ ಕಸಿ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿಯನ್ನು ಸೇರ್ಪಡೆ ಮಾಡಿ ಅಂಗಾಂಗ ಕಸಿ ಯೋಜನೆ ವಿಸ್ತರಿಸಲು ಆರೋಗ್ಯ ಇಲಾಖೆ ಬುದುವಾರ ಆದೇಶ ಹೊರಡಿಸಿದೆ.

ಜನವರಿ 16ರಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ 2018 ರಿಂದ ಬಡತನ ರೇಖೆಗಿಂತ ಕೆಳಗಿರುವ ಆದ್ಯತಾ ವಲಯದ ನಾಗರಿಕರಿಗಾಗಿ ಜಾರಿಯಲ್ಲಿರುವ ಅಂಗಾಂಗ ಕಸಿ ಯೋಜನೆಗೆ ಶ್ವಾಸಕೋಶ, ಹೃದಯ ಮತ್ತು ಮೂಳೆ ಮಜ್ಜೆ ಕಸಿ ಸೇರ್ಪಡೆ ಮಾಡಲು ನಿರ್ಧರಿಸಲಾಗಿತ್ತು.

ಇದರಡಿಯಲ್ಲಿಯೇ ಜೀವ ಸಾರ್ಥಕತೆ ಅಂಗಾಂಗ ಕಸಿ ಯೋಜನೆಯನ್ನು ವಿಸ್ತರಿಸಿ ಅಂಗಾಂಗ ಇಮ್ಯೂನೋಸಪ್ರೇಷನ್ ಔಷಧಿಗಳ ಖರೀದಿಯನ್ನು ಅತಿ ವಿರಳ ಮತ್ತು ದುಬಾರಿ ವೆಚ್ಚದ ಚಿಕಿತ್ಸಾ ವಿಧಾನಗಳ ಯೋಜನೆಯಲ್ಲಿ ವ್ಯಾಖ್ಯಾನಿಸಲಾದ ಷರತ್ತುಗಳ ಅನ್ವಯ ಅನುಷ್ಠಾನಗೊಳಿಸಲು ಬುಧವಾರ ರಾಜ್ಯ ಸರ್ಕಾರದಿಂದ ಆದೇಶ ಹೊರಡಿಸಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read