ಹೊಸಕೋಟೆ: 10ನೇ ತರಗತಿ ಓದುತ್ತಿದ್ದ ಇಬ್ಬರು ಬಾಲಕರು ಏಕಾಏಕಿ ನಾಪತ್ತೆಯಾಗಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಿಡಗಟ್ಟ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ಎಸ್ ಆರ್ ಇ ಎಸ್ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿಗಳು ಎರಡು ದಿನಗಳಿಂದ ನಾಪತ್ತೆಯಾಗಿದ್ದಾರೆ. ಅಭಿಷೇಕ್ ಸುಬ್ರಮಣಿ (16) ಹಾಗೂ ರಾಮಾಂಜಿನಿ ದೇವರಾಜ್ (16) ನಾಪತ್ತೆಯಾದ ಬಾಲಕರು.
ಮನೆಯಿಂದ ಬೈಕ್ ನಲ್ಲಿ ಹೂ ಮಾರಲೆಂಡು ಹೊಸಕೋಟೆ ಮಾರುಕಟ್ಟೆಗೆ ಹೋದವರೂ ಈವರೆಗೂ ಮನೆಗೆ ಹಿಂದಿರುಗಿಲ್ಲ, ಕಂಗಾಲಾಗಿರುವ ಪೊಷಕರು ಹೊಸಕೋಟೆ ಪೊಲೀಸ್ ಠಾನೆಯಲ್ಲಿ ದೂರು ದಾಖಲಿಸಿದ್ದಾರೆ.