BREAKING : ಚಿಕ್ಕಬಳ್ಳಾಪುರದಲ್ಲಿ ಘೋರ ದುರಂತ : ಕೆರೆಯಲ್ಲಿ ಈಜಲು ಹೋಗಿ ಮೂವರು ಬಾಲಕರು ಸಾವು.!

ಚಿಕ್ಕಬಳ್ಳಾಪುರ: ಕೆರೆಯಲ್ಲಿ ಈಜಲು ಹೋದ ಮೂವರು ಬಾಲಕರು ನೀರುಪಾಲಾಗಿ ಸಾವನ್ನಪ್ಪಿರುವ ಘೋರ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ.

ಇಲ್ಲಿನ ಬಾಗೇಪಲ್ಲಿ ತಾಲೂಕಿನ ಆಚೇಪಲ್ಲಿ ಗ್ರಾಮದ ಕೆರೆಯಲ್ಲಿ ಈ ದುರಂತ ಸಂಭವಿಸಿದೆ. ದಸರಾ ರಜೆ ಹಿನ್ನೆಲೆಯಲ್ಲಿ ಮಕ್ಕಳು ಕೆರೆಗೆ ಈಜಲು ಹೋಗಿದ್ದರು. ಆದರೆ ಮೂವರಲ್ಲಿ ಓರ್ವ ಬಾಲಕನಿಗೆ ಮಾತ್ರ ಈಜಲು ಬರುತ್ತಿತ್ತು, ಇನ್ನಿಬ್ಬರಿಗೆ ಈಜಲು ಬರುತ್ತಿರಲಿಲ್ಲ. ಈ ವೇಳೆ ಇಬ್ಬರು ಬಾಲಕರನ್ನು ರಕ್ಷಿಸಲು ಹೋಗಿ ಮತ್ತೋರ್ವ ಬಾಲಕ ಕೂಡ ನೀರುಪಾಲಾಗಿದ್ದಾನೆ

ವಿಷ್ಣು (14), ನಿಹಾಲ್ (12) ಹಾಗೂ ಹರ್ಷವರ್ಧನ್ (16) ಮೃತ ಬಾಲಕರು. ಘಟನಾ ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಗಳು ದೌಡಾಯಿಸಿ ಕೆರೆಯಲ್ಲಿ ಶೋಧ ಕಾರ್ಯ ನಡೆಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read