ಗಂಡನಿಂದ ದೂರವಾಗಿದ್ದವಳ ಜೊತೆ ಸಂಬಂಧ; ಗರ್ಭಿಣಿಯಾದ ಬಳಿಕ ಮದುವೆಯಾಗಲು ಒತ್ತಾಯಿಸಿದ್ದಕ್ಕೆ ಫ್ರೆಂಡ್ಸ್ ಜೊತೆ ಸೇರಿ ಮರ್ಡರ್

ಮದುವೆಯಾಗುವಂತೆ ಒತ್ತಾಯ ಮಾಡಿದ ನಂತರ ಬೇಸತ್ತ ಪ್ರೇಮಿ, ಗರ್ಭಿಣಿಯಾಗಿದ್ದ ಗೆಳತಿಯನ್ನು ಕಲ್ಲಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಮೀರತ್ ಜಿಲ್ಲೆಯಲ್ಲಿ ವರದಿಯಾಗಿದೆ.

ಹೊಲವೊಂದರಲ್ಲಿ ಗರ್ಭಿಣಿಯ ಶವ ಪತ್ತೆಯಾದ ಮೂರು ದಿನಗಳ ನಂತರ ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಆಕೆಯ ಪ್ರಿಯಕರ ಮತ್ತು ಇತರ ನಾಲ್ವರನ್ನು ಬಂಧಿಸಿದ್ದಾರೆ.

ಪೊಲೀಸರ ಪ್ರಕಾರ ಆರೋಪಿ ಆದೇಶ್ ಮತ್ತು ಅವನ ಸ್ನೇಹಿತರು ಮಹಿಳೆ ರಾಂಬಿರಿ ತಲೆಗೆ ಕಲ್ಲಿನಿಂದ ಹೊಡೆದು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾರೆ. ಆಕೆಯನ್ನು ಕೊಲೆ ಮಾಡಿದ ಬಳಿಕ ಶವವನ್ನು ಹೊಲದಲ್ಲಿ ಬಿಟ್ಟು ಸ್ಥಳದಿಂದ ಓಡಿ ಹೋಗಿದ್ದರು.

ಸಂತ್ರಸ್ತೆಯ ಕುಟುಂಬವು ರಂಬಿರಿಯನ್ನು ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ಪೊಲೀಸ್ ದೂರು ದಾಖಲಿಸಿದ್ದು, ಪ್ರಕರಣದ ಎಲ್ಲ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಪ್ರಕರಣ ಕುರಿತು ತನಿಖೆ ನಡೆಸಿದಾಗ 2015ರಲ್ಲಿ ವಿನೋದ್ ಎಂಬಾತನನ್ನು ರಂಬೀರಿ ಮದುವೆಯಾಗಿದ್ದು, ಒಂದು ವರ್ಷದ ನಂತರ ದಂಪತಿ ಬೇರೆಯಾದರು. ನಂತರ ರಾಂಬಿರಿ ತನ್ನ ತಂದೆಯ ಮನೆಯಲ್ಲಿ ಉಳಿದುಕೊಂಡಿದ್ದರು.

ಅಲ್ಲಿ ಆಕೆ ಆದೇಶ್‌ನನ್ನು ಭೇಟಿಯಾಗಿ ಇಬ್ಬರೂ ಸಂಬಂಧ ಬೆಳೆಸಿದರು. ಇದರ ಪರಿಣಾಮ ರಾಂಬಿರಿ ಗರ್ಭಿಣಿಯಾಗಿದ್ದು ಮದುವೆಯಾಗುವಂತೆ ಒತ್ತಡ ಹೇರಲು ಆರಂಭಿಸಿದ್ದರು. ತನ್ನನ್ನು ಮದುವೆಯಾಗಲು ರಾಂಬಿರಿಯ ನಿರಂತರ ಬೇಡಿಕೆಯಿಂದ ಬೇಸತ್ತ ಆದೇಶ್ ತನ್ನ ಸ್ನೇಹಿತರೊಂದಿಗೆ ಅವಳನ್ನು ಕೊಲ್ಲಲು ಸಂಚು ರೂಪಿಸಿದನು.

ಜುಲೈ 2 ರಂದು ಆದೇಶ್, ರಾಂಬಿರಿಯನ್ನು ತನ್ನ ಮನೆಯಲ್ಲಿ ಭೇಟಿಯಾಗುವಂತೆ ಆಹ್ವಾನಿಸಿ, ಗೆಳೆಯರೊಂದಿಗೆ ಸೇರಿ ಹೊಡೆದು ಕೊಂದು ಶವವನ್ನು ಹೊಲದಲ್ಲಿ ಹಾಕಿ ಹೋಗಿದ್ದರು.

ಪ್ರಕರಣದ ಇತರ ನಾಲ್ವರು ಆರೋಪಿಗಳಾದ ದೀಪಕ್, ಆರ್ಯನ್, ಸಂದೀಪ್ ಮತ್ತು ರೋಹಿತ್ ಪೊಲೀಸ್ ವಶದಲ್ಲಿದ್ದು ಮುಂದಿನ ತನಿಖೆ ನಡೆಯುತ್ತಿದೆ.

Boyfriend impregnates married woman, assaults and kills her using bricks -  India Today

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read