ಸಾಮಾಜಿಕ ಮಾಧ್ಯಮದಲ್ಲಿ ಫೇಮಸ್ ಆಗೋಕೆ ಏನ್ ಬೇಕಾದ್ರು ಮಾಡ್ತಾರೆ ಜನ. ಆದ್ರೆ, ರಷ್ಯಾದ ವ್ಯಕ್ತಿಯೊಬ್ಬ ಮರ್ಸಿಡಿಸ್ ಕಾರಿನೊಳಗೆ ಜೀವಂತ ಸಮಾಧಿಯಾದ ವಿಡಿಯೋ ವೈರಲ್ ಆಗಿದ್ದು, 100 ಮಿಲಿಯನ್ ವೀಕ್ಷಣೆಗಳನ್ನು ಗಳಿಸಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ @chebotarev_evgeny ಹಂಚಿಕೊಂಡಿರುವ ವಿಡಿಯೋದಲ್ಲಿ, ಆತ ತನ್ನ ಐಷಾರಾಮಿ ಕಾರನ್ನು ಮೊದಲೇ ಅಗೆದಿದ್ದ ಗುಂಡಿಗೆ ಓಡಿಸ್ತಾನೆ. ಕಾರಿನಿಂದ ಹೊರಬರದೇ, ಒಳಗಡೆನೇ ಕೂತ್ಕೋತಾನೆ. ನೋಡೋರೆಲ್ಲಾ ಕಾರಿನ ಮೇಲೆ ಮಣ್ಣು ಹಾಕ್ತಾರೆ. ಆಮೇಲೆ ಜೆಸಿಬಿ ಯಂತ್ರದಿಂದ ಕಾರನ್ನು ಸಂಪೂರ್ಣವಾಗಿ ಮುಚ್ಚಿಬಿಡ್ತಾರೆ.
ಭಯಾನಕ ಪರಿಸ್ಥಿತಿಯಲ್ಲೂ ಆತ ಶಾಂತವಾಗಿ ವೈನ್ ಬಾಟಲಿ ತೋರಿಸ್ತಾನೆ. ಆಮ್ಲಜನಕದ ಕೊರತೆ ಮತ್ತು ಟನ್‌ಗಳಷ್ಟು ಮಣ್ಣಿನ ಒತ್ತಡದ ನಡುವೆಯೂ ನಗ್ತಾನೆ.
ಈ ವಿಡಿಯೋ ನೋಡಿದ ಜನರಿಗೆ ಆಶ್ಚರ್ಯವಾಗಿದೆ. ಕೆಲವರು ಇದನ್ನ ಮೂರ್ಖತನ ಅಂದ್ರೆ, ಇನ್ನೂ ಕೆಲವರು ಆತನ ಮಾನಸಿಕ ಸ್ಥಿತಿ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ಆತ ಹೇಗೆ ಉಸಿರಾಡ್ತಿದ್ದಾನೆ ಅಂತಾ ಕಾಳಜಿ ವ್ಯಕ್ತಪಡಿಸಿದ್ದಾರೆ.
ಇನ್‌ಫ್ಲುಯೆನ್ಸರ್‌ನ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಇಂತಹ ಅಪಾಯಕಾರಿ ಸಾಹಸಗಳೇ ತುಂಬಿವೆ. ಈ ಸಾಹಸ ನೋಡಿದ ಜನರಿಗೆ, ಫೇಮಸ್ ಆಗೋಕೆ ಜನ ಯಾವ ಹಂತಕ್ಕೆ ಬೇಕಾದ್ರೂ ಹೋಗ್ತಾರೆ ಅಂತ ಅನಿಸಿದೆ.