ಬೆಂಗಳೂರು: ಬೆಂಗಳೂರು ಉತ್ತರ ತಾಲೂಕಿನ ದಾಸನಪುರ ಸಮೀಪ ಮಾಕಳಿಯ ಬೈಲಾಂಜನೇಯ ಸ್ವಾಮಿ ದೇವಾಲಯದಲ್ಲಿ ಗೇಟ್ ಬಿದ್ದು ಬಾಲಕನ ಕಾಲು ಮುರಿದಿದೆ.
ಲೋಹಿತ್ ನಾಯ್ಕ್(11) ಎಂಬ ಬಾಲಕನ ಕಾಲು ಮುರಿದಿದೆ. ದೇವಸ್ಥಾನದ ಗೇಟ್ ಬಾಲಕನ ತೊಡೆಯ ಮೇಲೆ ಬಿದ್ದು ಮೂಳೆ ಮುರಿದಿದೆ. ಹಾಸನ ಜಿಲ್ಲೆ ಅರಸೀಕೆರೆ ಮೂಲದ ಕುಮಾರ್ ನಾಯ್ಕ್ ಮತ್ತು ಭಾರತಿ ಬಾಯಿ ದಂಪತಿ 15 ವರ್ಷಗಳಿಂದ ಮಾಕಳಿಯಲ್ಲಿ ವಾಸವಾಗಿದ್ದಾರೆ.
ಕ್ಯಾಬ್ ಚಾಲಕನಾಗಿರುವ ಕುಮಾರ್ ಮಾಕಳಿಯ ಬೈಲಾಂಜನೇಯ ಸ್ವಾಮಿ ದೇವಾಲಯಕ್ಕೆ ಮಗ ಲೋಹಿತ್ ನನ್ನು ಕರೆದುಕೊಂಡು ಹೋಗಿದ್ದರು. ದೇವಸ್ಥಾನದ ಬಳಿ ಬಾಲಕ ಆಟವಾಡುತ್ತಿದ್ದಾಗ ಹಳೆಯದಾಗಿದ್ದ ಗೇಟ್ ಬಿದ್ದಿದೆ. ಬಾಲಕನ ತೊಡೆ ಮೇಲೆ ಗೇಟ್ ಬಿದ್ದಿದ್ದು ಮೂಳೆ ಮುರಿದಿದೆ. ಮುಜರಾಯಿ ಇಲಾಖೆಯ ನಿರ್ಲಕ್ಷ್ಯವೇ ಇದಕ್ಕೆ ಕಾರಣವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
