ಒಂದೇ ರೀತಿಯಲ್ಲಿದೆಯಾ 2025 ರ ಕುರಿತ ಬಾಬಾ ವಂಗಾ – ನಾಸ್ಟ್ರಾಡಾಮಸ್ ಭಯಾನಕ ಭವಿಷ್ಯ ? ಇಲ್ಲಿದೆ ಇಂಟ್ರಸ್ಟಿಂಗ್‌ ವಿವರ

ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಇಬ್ಬರೂ ಸಹ ತಮ್ಮ ಭವಿಷ್ಯವಾಣಿಗಳಿಗೆ ಹೆಸರುವಾಸಿಯಾಗಿದ್ದಾರೆ. ಅಲ್ಲದೇ ಅದು ವರ್ಷದಿಂದ ವರ್ಷಕ್ಕೆ ನಿಜವಾಗಿದೆ. ಈಗ, 2025 ವರ್ಷವು ಪ್ರಾರಂಭವಾಗುವುದು ಸನಿಹವಾಗುತ್ತಿದ್ದು, ಈ ಕುರಿತೂ ಅವರುಗಳು ಭವಿಷ್ಯ ನುಡಿದಿದ್ದಕ್ಕಾಗಿ ಮತ್ತೆ ವೈರಲ್ ಆಗುತ್ತಿದ್ದಾರೆ.

ಈ ಪೌರಾಣಿಕ ಪ್ರವಾದಿಗಳು 2025 ಕ್ಕೆ ವಿನಾಶಕಾರಿ ಬೆಳವಣಿಗೆಯನ್ನು ಊಹಿಸಿದ್ದಾರೆ. ಅಂದರೆ – 2025 ರಲ್ಲಿ ಯುರೋಪಿನಲ್ಲಿ ಸಂಘರ್ಷವು ಅದರ ಜನಸಂಖ್ಯೆಯ ಹೆಚ್ಚಿನ ಪ್ರಮಾಣವನ್ನು ಅಳಿಸಿಹಾಕುತ್ತದೆ ಎಂದು ಹೇಳಿದ್ದಾರೆ. ಬಲ್ಗೇರಿಯನ್ ಮೂಲದ ಬಾಬಾ ವಂಗಾ ಅವರ ಕೆಲವು ಭವಿಷ್ಯವಾಣಿಗಳು ನಿಜವಾದ ನಂತರ ಎಲ್ಲರೂ ಇದು ಕೂಡ ನಿಜವಾಗಲಿದೆ ಎಂದು ಬಹುತೇಕರು ಲೆಕ್ಕ ಹಾಕುತ್ತಿದ್ದಾರೆ. ಬಾಲ್ಕನ್ಸ್‌ನ ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಬಾಬಾ ವಂಗಾ 9/11 ಭಯೋತ್ಪಾದಕ ದಾಳಿ, ರಾಜಕುಮಾರಿ ಡಯಾನಾ ಸಾವು, ಚೆರ್ನೋಬಿಲ್ ದುರಂತ ಮತ್ತು ಬ್ರೆಕ್ಸಿಟ್‌ನಂತಹ ಕೆಲವು ಪ್ರಮುಖ ಪ್ರಪಂಚದ ಘಟನೆಗಳನ್ನು ಭವಿಷ್ಯ ನುಡಿದಿದ್ದರು ಎಂದು ಹೇಳಲಾಗುತ್ತೆ. ಮತ್ತೊಂದೆಡೆ, ನಾಸ್ಟ್ರಾಡಾಮಸ್ ಎಂದೂ ಕರೆಯಲ್ಪಡುವ ಪ್ರಾಚೀನ ಫ್ರೆಂಚ್ ಜ್ಯೋತಿಷಿ ಮೈಕೆಲ್ ಡಿ ನಾಸ್ಟ್ರೆಡೇಮ್ ಸಹ ಅನೇಕ ನಿಖರವಾದ ಭವಿಷ್ಯವಾಣಿಗಳನ್ನು ಮಾಡಿದ್ದಾರೆ.

2025 ಕ್ಕೆ ಬಾಬಾ ವಂಗಾ ಮತ್ತು ನಾಸ್ಟ್ರಾಡಾಮಸ್ ಅವರ ಭವಿಷ್ಯ

ಮುಂಬರುವ ವರ್ಷದಲ್ಲಿ, ಬಾಬಾ ವಂಗಾ ಯುರೋಪ್ನಲ್ಲಿ ದುರಂತದ ಯುದ್ಧವನ್ನು ಮುನ್ಸೂಚಿಸಿದ್ದಾರೆ, ಇದು ವ್ಯಾಪಕ ವಿನಾಶ ಮತ್ತು ಗಮನಾರ್ಹ ಜನಸಂಖ್ಯೆಯ ನಷ್ಟಕ್ಕೆ ಕಾರಣವಾಗುತ್ತದೆ. ಈ ಸಂಘರ್ಷವು 2025 ರಲ್ಲಿ ಖಂಡವನ್ನು “ಧ್ವಂಸಗೊಳಿಸುತ್ತದೆ” ಎಂದು ಅವರು ಹೇಳಿದ್ದಾರೆ.

2025 ರಲ್ಲಿ ನಡೆಯುತ್ತಿರುವ ಘಟನೆಗಳು ಜಾಗತಿಕ ವಿನಾಶಕ್ಕೆ ಮುನ್ನುಡಿ ಬರೆಯಬಹುದು ಎಂದು ವಂಗಾ ಹೇಳಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಎರಡು ದೇಶಗಳ ನಡುವೆ 2025 ರಲ್ಲಿ ಹೊಸ ಯುದ್ಧವು ಭುಗಿಲೆಳುವ ಸಾಧ್ಯತೆ ಇದ್ದು, ಇದರ ಪರಿಣಾಮಗಳು ಪ್ರಪಂಚದಾದ್ಯಂತ ಸಂಭವಿಸುತ್ತದೆ ಎನ್ನಲಾಗಿದೆ.

ನಾಸ್ಟ್ರಾಡಾಮಸ್ ಕೂಡ ಯುರೋಪ್‌ ಕುರಿತು ಭೀಕರ ಭವಿಷ್ಯವನ್ನು ಹೇಳಿದ್ದಾರೆ. ಖಂಡವನ್ನು ಆವರಿಸುವ “ಕ್ರೂರ ಯುದ್ಧಗಳು” ಮತ್ತು “ಪ್ರಾಚೀನ ಪ್ಲೇಗ್” ನ ಪುನರುತ್ಥಾನದ ಬಗ್ಗೆ ಸೂಚಿಸುತ್ತಿದ್ದು, ಅದು ಶತ್ರುಗಳಿಗಿಂತ ಕೆಟ್ಟದಾಗಿದೆ. ಈಗ ನಡೆಯುತ್ತಿರುವ ರಷ್ಯಾ-ಉಕ್ರೇನ್ ಸಂಘರ್ಷವು ಕೊನೆಗೊಳ್ಳುತ್ತದೆ ಎಂದು ನಾಸ್ಟ್ರಾಡಾಮಸ್ ಉಲ್ಲೇಖಿಸಿದ್ದಾರೆ.  ಎರಡೂ ಕಡೆಗಳಲ್ಲಿ ಸಂಪನ್ಮೂಲಗಳು ಮತ್ತು ಇಚ್ಛಾಶಕ್ತಿಯ ಸವಕಳಿ ಇರುತ್ತದೆ. ಆದಾಗ್ಯೂ, ಈ ಬಿಡುವು ಅಲ್ಪಕಾಲಿಕವಾಗಿರಬಹುದು ಎಂದಿದ್ದಾರೆ.

ಇನ್ನು ವಂಗಾ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಗೆಲುವಿನ ಬಗ್ಗೆಯೂ ಸ್ಪಷ್ಟವಾಗಿ ಮಾತನಾಡಿದ್ದಾರೆ. ವಂಗಾ ಪ್ರಕಾರ “ಎಲ್ಲವೂ ಮಂಜುಗಡ್ಡೆಯಂತೆ ಕರಗುತ್ತದೆ, ಕೇವಲ ವ್ಲಾಡಿಮಿರ್ನ ವೈಭವ, ರಷ್ಯಾದ ವೈಭವ ಮಾತ್ರ ಉಳಿಯುತ್ತದೆ ಎಂದು ಸಂಕೇತಗಳ ಮೂಲಕ ಊಹಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read