ಸಿದ್ದಾರ್ಥ್ ಹಾಗೂ ಜೆನಿಲಿಯಾ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ‘ಬೊಮ್ಮರಿಲ್ಲು’ ಚಿತ್ರ ಬಿಡುಗಡೆಯಾಗಿ ಇಂದಿಗೆ 18 ವರ್ಷಗಳಾಗಿವೆ. 2006 ಆಗಸ್ಟ್ 9 ರಂದು ತೆರೆ ತೆರೆ ಕಂಡಿದ್ದ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆಯುವುದಲ್ಲದೆ ಬಾಕ್ಸ್ ಆಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ಬರೆದಿತ್ತು. ಇಂದು 18 ವರ್ಷ ಪೂರೈಸಿರುವ ಈ ಸಂತಸವನ್ನು ಚಿತ್ರತಂಡ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದೆ.
ರೋಮ್ಯಾಂಟಿಕ್ ಫ್ಯಾಮಿಲಿ ಡ್ರಾಮಾ ಕಥಾಹಂದರ ಹೊಂದಿರುವ ಈ ಚಿತ್ರವನ್ನು ಭಾಸ್ಕರ್ ನಿರ್ದೇಶಿಸಿದ್ದು, ಸಿದ್ಧಾರ್ಥ್ ಹಾಗೂ ಜೆನಿಲಿಯಾ ಸೇರಿದಂತೆ ಪ್ರಕಾಶ್ ರಾಜ್, ಕೋಟಾ ಶ್ರೀನಿವಾಸ ರಾವ್, ಸತ್ಯ ಕೃಷ್ಣನ್, ಸುದೀಪ ಪಿಂಕಿ ಬುಜ್ಜಿ, ಧರ್ಮವರಪು ಸುಬ್ರಹ್ಮಣ್ಯಂ, ಸುರೇಖಾ ವಾಣಿ, ವಿಜಯ್ ಸಾಯಿ, ಬ್ರಹ್ಮಾನಂದಂ, ರಘುನಾಥ ರೆಡ್ಡಿ, ನರಸಿಂಗ್ ಯಾದವ್ ಬಣ್ಣ ಹಚ್ಚಿದ್ದಾರೆ. ಶ್ರೀ ವೆಂಕಟೇಶ್ವರ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ದಿಲ್ ರಾಜು ನಿರ್ಮಾಣ ಮಾಡಿದ್ದಾರೆ. ಖ್ಯಾತ ಸಂಗೀತ ನಿರ್ದೇಶಕ ದೇವಿ ಶ್ರೀ ಪ್ರಸಾದ್ ಮ್ಯೂಸಿಕ್ ಕಂಪೋಸ್ ಮಾಡಿದ್ದು, ಮಾರ್ಥಾಂಡ್ ಕೆ ವೆಂಕಟೇಶ್ ಸಂಕಲನವಿದೆ.
https://twitter.com/telugufilmnagar/status/1821813792688501120