
ವಾಹನ ಸಂಚಾರದ ವೇಳೆ ಟೈಯರ್ ಬರ್ಸ್ಟ್ ಆಗಿ ಅಪಘಾತ ಸಂಭವಿಸುವುದು ‘ಆಕ್ಟ್ ಆಫ್ ಗಾಡ್’ ಅಲ್ಲ ಬದಲಾಗಿ ಅದು ಚಾಲಕನ ನಿರ್ಲಕ್ಷದಿಂದ ಸಂಭವಿಸುವ ವಿದ್ಯಾಮಾನ ಎಂದು ಅಭಿಪ್ರಾಯ ಪಟ್ಟಿರುವ ಬಾಂಬೆ ಹೈಕೋರ್ಟ್, ಟೈಯರ್ ಬರ್ಸೂ ಆಗಿರುವುದು ‘ಆಕ್ಟ್ ಆಫ್ ಗಾಡ್’ ಕಾರಣಕ್ಕಾಗಿರುವುದರಿಂದ ಪರಿಹಾರ ನೀಡಲು ಸಾಧ್ಯವಿಲ್ಲ ಎಂಬ ಇನ್ಸುರೆನ್ಸ್ ಕಂಪನಿಯ ವಾದವನ್ನು ತಳ್ಳಿ ಹಾಕಿದೆ.
ಪ್ರಕರಣದ ವಿವರ: 2017ರಲ್ಲಿ ನಡೆದ ಕಾರು ಅಪಘಾತದಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಕಾರು ಚಾಲನೆ ಮಾಡುತ್ತಿದ್ದ ಆತನ ಸ್ನೇಹಿತ ಪಾರಾಗಿದ್ದರು. ಅಪಘಾತಕ್ಕೆ ಕಾರಿನ ಟೈಯರ್ ಏಕಾಏಕಿ ಬರ್ಸ್ಟ್ ಆಗಿದ್ದು ಕಾರಣವಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಮೋಟಾರ್ ಅಪಘಾತ ಪರಿಹಾರ ಟ್ರಿಬ್ಯುನಲ್ ಮೃತರ ಕುಟುಂಬಕ್ಕೆ 2.25 ಲಕ್ಷ ರೂಪಾಯಿ ಪರಿಹಾರ ನೀಡಲು ಸೂಚಿಸಿತ್ತು.
ಆದರೆ ಇದನ್ನು ಪ್ರಶ್ನಿಸಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ, ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದು, ವಾಹನದ ಟೈಯರ್ ಬರ್ಸ್ಟ್ ಆಗಿದ್ದು ವಿಧಿ ಲಿಖಿತ. ಇದರಲ್ಲಿ ಮಾನವ ದೋಷ ಇರಲಿಲ್ಲ. ಹೀಗಾಗಿ ಪರಿಹಾರ ನೀಡಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ನ್ಯಾಯಮೂರ್ತಿ ಎಸ್.ಜಿ. ದಿಗೆ ನಡೆಸಿದ್ದರು.
ಇದೀಗ ಈ ಕುರಿತಂತೆ ತೀರ್ಪು ಅವರ ಬಿದ್ದಿದ್ದು, ಟೈಯರ್ ಬರ್ಸ್ಟ್ ಆಗಿರುವುದು ಆಕ್ಟ್ ಆಫ್ ಗಾಡ್ ಅಲ್ಲ. ಬದಲಾಗಿ ವಾಹನ ಚಾಲಕನ ನಿರ್ಲಕ್ಷವೇ ಇದಕ್ಕೆ ಕಾರಣ. ಟೈಯರ್ಗೆ ಹೆಚ್ಚಿನ ಗಾಳಿ ತುಂಬಿದರೂ ಅಥವಾ ಕಡಿಮೆ ಗಾಳಿ ತುಂಬಿದರೂ ಕಷ್ಟ. ಅಲ್ಲದೆ ಟೈಯರ್ ಸುಸ್ಥಿತಿಯಲ್ಲಿಡುವುದು ಸಹ ಅಷ್ಟೇ ಮುಖ್ಯ. ಹೀಗಾಗಿ ಚಾಲಕನ ನಿರ್ಲಕ್ಷವೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿ ಇನ್ಸುರೆನ್ಸ್ ಕಂಪನಿಯ ವಾದವನ್ನು ತಳ್ಳಿ ಹಾಕಿದೆ. ಅಲ್ಲದೆ ಈ ಹಿಂದೆ ಮೋಟಾರು ಅಪಘಾತ ಪರಿಹಾರ ಟ್ರಿಬ್ಯುನಲ್ ನೀಡಿದ ಆದೇಶವನ್ನು ಎತ್ತಿ ಹಿಡಿದಿದೆ.

 
		 
		 
		 
		 Loading ...
 Loading ... 
		 
		 
		