ನವದೆಹಲಿ : ಬಾಲಿವುಡ್ ನ ಹಲವು ಚಿತ್ರಗಳನ್ನು ನಿರ್ಮಿಸಿದ್ದ ಧೀರಜ್ ಲಾಲ್ ಶಾ ಅವರು ಮಾರ್ಚ್ 11 ರಂದು ಬೆಳಿಗ್ಗೆ ನಿಧನರಾದರು.
ಧೀರಜ್ ಲಾಲ್ ಶಾ ಅವರು ಮುಂಬೈನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೇ ಅವರು ಮೃತಪಟ್ಟಿದ್ದಾರೆ.
ಭಾರತೀಯ ಚಲನಚಿತ್ರ ಟಿವಿ ನಿರ್ಮಾಪಕರ ಮಂಡಳಿಯ ಅಧಿಕೃತ ಎಕ್ಸ್ ಹ್ಯಾಂಡಲ್ ಮಾರ್ಚ್ 11 ರಂದು ದುರಂತ ಪ್ರಕಟಣೆಯನ್ನು ಹಂಚಿಕೊಂಡಿದೆ. ” ಧೀರಜ್ಲಾಲ್ ನಂಜಿ ಶಾ ಜಿ ಅವರ ನಿಧನದಿಂದ ತೀವ್ರ ದುಃಖವಾಗಿದೆ. ಕುಟುಂಬ ಮತ್ತು ಪ್ರೀತಿಪಾತ್ರರಿಗೆ ಸಂತಾಪಗಳು. ಓಂ ಶಾಂತಿ” ಎಂದು ಬರೆದುಕೊಂಡಿದ್ದಾರೆ.
ಧೀರಜ್ಲಾಲ್ ಅವರ ಸಹೋದರ ಹಸ್ಮುಖ್ ಅವರು ತಮ್ಮ ಸಹೋದರನಿಗೆ ಕೋವಿಡ್ -19 ಸೋಂಕು ತಗುಲಿದೆ ಎಂದು ಬಹಿರಂಗಪಡಿಸಿದರು, ಕಳೆದ 20 ದಿನಗಳಲ್ಲಿ ಅವರ ಆರೋಗ್ಯ ಹದಗೆಟ್ಟಿತು ಮತ್ತು ನಾವು ಅವರನ್ನು ಐಸಿಯುಗೆ ದಾಖಲಿಸಬೇಕಾಯಿತು. ಅವರ ಮೂತ್ರಪಿಂಡ ಮತ್ತು ಹೃದಯದ ಮೇಲೆ ಪರಿಣಾಮ ಬೀರಿತು, ಇದು ಬಹು ಅಂಗಾಂಗ ವೈಫಲ್ಯಕ್ಕೆ ಕಾರಣವಾಯಿತು” ಎಂದು ಅವರು ಹೇಳಿದರು.
Deeply Saddening News Owner of Apna Cinema & Time Video Mr. Dhirajlal Nanji Shah Ji has passed away. Deepest condolences to the family and loved ones. Om Shanti. #omshanti #IFTPC #SajidNadiadwala @JDMajethia #RatanJain @NitinPVaidya @RameshTaurani @nrpachisia @tsunami_singh pic.twitter.com/V2OrET1mgh
— INDIAN FILM TV PRODUCERS COUNCIL (@IftpcM) March 11, 2024