‘ಲಗಾನ್’ ಖ್ಯಾತಿಯ ಕಲಾ ನಿರ್ದೇಶಕ ನಿತಿನ್ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ

Bollywood: Lagaan art director Nitin Desai found dead, suicide suspected - News | Khaleej Times

‘ಲಗಾನ್’ ಮತ್ತು ‘ಜೋಧಾ ಅಕ್ಬರ್’ ಸೇರಿದಂತೆ ಹಲವು ಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ 57 ವರ್ಷದ ನಿತಿನ್ ದೇಸಾಯಿ ಅವರ ಮೃತ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಮುಂಬೈ ಹೊರ ವಲಯದಲ್ಲಿರುವ ಎನ್‌ಡಿ ಸ್ಟುಡಿಯೋದಲ್ಲಿ ನಿತಿನ್ ದೇಸಾಯಿ ಅವರ ಮೃತ ದೇಹ ಕಂಡುಬಂದಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.

ನಿತಿನ್ ದೇಸಾಯಿ ಅವರ ಕಂಪನಿ ಎನ್‌ಡಿ ಆರ್ಟ್ ವರ್ಲ್ಡ್ ಪ್ರೈವೇಟ್ ಲಿಮಿಟೆಡ್ 252 ಕೋಟಿ ರೂಪಾಯಿ ಸಾಲದ ಹೊರೆಯನ್ನು ಹೊಂದಿತ್ತು ಎನ್ನಲಾಗಿದ್ದು, ಕಳೆದ ವಾರ ನ್ಯಾಯಾಲಯದಲ್ಲಿ ದಿವಾಳಿತನದ ಅರ್ಜಿ ಸಲ್ಲಿಸಲಾಗಿತ್ತು. ಈ ಹಿನ್ನಲೆಯಲ್ಲಿ ಮನನೊಂದು ಸಾವಿಗೆ ಶರಣಾಗಿರಬಹುದು ಎಂದು ಹೇಳಲಾಗಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read