ಈ ಕಾರಣಕ್ಕೆ  ‘ಪ್ರಧಾನಿ  ಮೋದಿ’ ನನಗೆ ಬೈದಿದ್ದರು ಎಂದ ಬಾಲಿವುಡ್ ನಟ ‘ಮಿಥುನ್ ಚಕ್ರವರ್ತಿ’..!

ನವದೆಹಲಿ : ಹಿರಿಯ ನಟ ಮಿಥುನ್ ಚಕ್ರವರ್ತಿ ಸೋಮವಾರ (ಫೆಬ್ರವರಿ 12, 2024) ಕೋಲ್ಕತ್ತಾದ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಡಿಸ್ಚಾರ್ಜ್ ಆದ ಬಳಿಕ ನಟ ಮಿಥುನ್ ಚಕ್ರವರ್ತಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.   ಪ್ರಧಾನಿ ನರೇಂದ್ರ ಮೋದಿಯವರಿಂದ ದೂರವಾಣಿ ಕರೆ ಬಂದಿದ್ದು, ಅವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ ಎಂದು ಮಿಥುನ್ ಬಹಿರಂಗಪಡಿಸಿದ್ದಾರೆ. ನನ್ನ ಆರೋಗ್ಯದ ಬಗ್ಗೆ ಕಾಳಜಿ ವಹಿಸದಿದ್ದಕ್ಕಾಗಿ ನನಗೆ ಬೈದರು ಎಂದು ಹೇಳಿದ್ದಾರೆ.

ಮಿಥುನ್ ಅವರಿಗೆ ಇತ್ತೀಚೆಗೆ ದೇಶದ ಮೂರನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣವನ್ನು ನೀಡಿ ಗೌರವಿಸಲಾಗಿತ್ತು. 2021 ರಲ್ಲಿ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ, ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು.

ಮಿಥುನ್ ಅತ್ಯುತ್ತಮ ನಟನಿಗಾಗಿ ಮೂರು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದಾರೆ . ಅವರು ೧೯೬೭ ರಲ್ಲಿ ಆರ್ಟ್ ಹೌಸ್ ನಾಟಕ ಮೃಗಯಾ ಮೂಲಕ ಸಿನಿಮಾರಂಗಕ್ಕೆ  ಪಾದಾರ್ಪಣೆ ಮಾಡಿದರು. ಅಂದಿನಿಂದ, ಅವರು ಹಿಂದಿ, ಬಂಗಾಳಿ, ಒಡಿಯಾ, ಭೋಜ್ಪುರಿ ಮತ್ತು ತಮಿಳು ಭಾಷೆಗಳಲ್ಲಿ ಸುಮಾರು 350 ಚಿತ್ರಗಳಲ್ಲಿ ನಟಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read