BIG NEWS : ಆಪ್ತ ಸ್ನೇಹಿತ ಅಂಬರೀಷ್ ನಿಧನ ದಿನದಂದೇ ಬಾಲಿವುಡ್ ನಟ ಧರ್ಮೇಂದ್ರ ವಿಧಿವಶ.!

ನವದೆಹಲಿ : ಬಾಲಿವುಡ್ ಹಿರಿಯ ನಟ ಧರ್ಮೇಂದ್ರ ಅನಾರೋಗ್ಯದಿಂದ ಇಂದು ನಿಧನರಾಗಿದ್ದು, ಸಿನಿ ಗಣ್ಯರು ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಛಾಪು ಮೂಡಿಸಿದ ನಟ ಧರ್ಮೇಂದ್ರ ನಿಧನಕ್ಕೆ ಅಭಿಮಾನಿಗಳು ಕಂಬನಿ ಮಿಡಿದಿದ್ದಾರೆ.

ಕಾಕತಾಳೀಯ ಎಂಬಂತೆ ರೆಬೆಲ್ ಸ್ಟಾರ್ ಅಂಬರೀಷ್ ಪುಣ್ಯ ಸ್ಮರಣೆ ದಿನದಂದೇ ನಟ ಧರ್ಮೇಂದ್ರ ವಿಧಿವಶರಾಗಿದ್ದಾರೆ. ಇಂದಿಗೆ (ನ.24) ನಟ ಅಂಬರೀಷ್ ನಿಧನರಾಗಿ 7 ವರ್ಷ ತುಂಬುತ್ತಿದೆ. ಅಂಬಿ ನಿಧನರಾಗಿದ್ದ ದಿನವೇ ನಟ ಧರ್ಮೇಂದ್ರ ಕೂಡ ನಿಧನರಾಗಿದ್ದಾರೆ. ಧರ್ಮೇಂದ್ರ ಹಾಗೂ ಅಂಬರೀಷ್ ಆಪ್ತ ಸ್ನೇಹಿತರಾಗಿದ್ದರು. ಕಾಕತಾಳೀಯ ಎಂಬಂತೆ ರೆಬೆಲ್ ಸ್ಟಾರ್ ಅಂಬರೀಷ್ ಪುಣ್ಯ ಸ್ಮರಣೆ ದಿನದಂದೇ ನಟ ಧರ್ಮೇಂದ್ರ ಇಹಲೋಕ ತ್ಯಜಿಸಿದ್ದಾರೆ.

ಅಂಬಿ ನೀವು ಅಮರ : ಸುಮಲತಾ ಟ್ವೀಟ್

”ಇಂದು ನಿಮ್ಮ ಅಗಲಿಕೆಗೆ ಏಳು ವರ್ಷಗಳು. ನೀವು ಇಲ್ಲ ಎನ್ನುವ ಕೊರಗು ಒಂದು ಕಡೆ ಕಾಡುತ್ತಿದೆ. ಎಲ್ಲೋ ಒಂದುಕಡೆ ನಮ್ಮೊಂದಿಗೇ ಇದ್ದೀರಿ ಎನ್ನುವ ನಂಬಿಕೆಯೊಂದಿಗೆ ನಾವಿದ್ದೇವೆ. ನೀವು ತೋರಿದ ಪ್ರೀತಿ, ಹೃದಯವಂತಿಕೆ, ಔದಾರ್ಯ… ಇವೆಲ್ಲವೂ ನನ್ನಲ್ಲಿ, ಅಭಿಮಾನಿಗಳಲ್ಲಿ, ಕೋಟ್ಯಂತರ ಕನ್ನಡಿಗರ ಹೃದಯದಲ್ಲಿ ಇನ್ನೂ ಜೀವಂತವಾಗಿವೆ. . ನೀವು ಒಬ್ಬ ನಟನಾಗಿ ಮಾತ್ರವಲ್ಲ, ಒಬ್ಬ ಮನುಷ್ಯನಾಗಿ ಗೆದ್ದವರು. ಅದಕ್ಕೇ ನಿಮ್ಮನ್ನು ಈ ನಾಡಿನ ಜನತೆ ಕರ್ಣ ಎಂದು ಕರೆದಿದ್ದಾರೆ. ಅಂಬಿ… ನೀವು ಹೋದರೂ ನಮ್ಮ ಜೊತೆಯಲ್ಲೇ ಇದ್ದೀರಾ… ನೀವು ಇಲ್ಲದ ಈ ಏಳು ವರ್ಷಗಳಲ್ಲಿ ನಾನೊಬ್ಬಳೇ ಅಲ್ಲ, ಪ್ರತಿ ಅಭಿಮಾನಿಯ ಮನದಲ್ಲಿಯೂ ನಿಮ್ಮ ನೆನಪನ್ನು ಜೀವಂತವಾಗಿ ಇಟ್ಟಿದ್ದಾರೆ. ನಿಮ್ಮನ್ನು ಪ್ರೀತಿಸಿದ ಜನರ ಹೃದಯದಲ್ಲಿ ನೀವು ಎಂದೆಂದಿಗೂ ಜೀವಂತವಾಗಿದ್ದೀರಿ. ಅಂಬಿ… ನೀವು ಅಮರ” ಎಂದು ಅಂಬರೀಷ್ ಪತ್ನಿ ಸುಮಲತಾ ಟ್ವೀಟ್  ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read