Udupi : ಇನ್ನೂ ಪತ್ತೆಯಾಗಿಲ್ಲ ಜಲಪಾತದಲ್ಲಿ ಜಾರಿ ಬಿದ್ದಿದ್ದ ಯುವಕನ ಶವ : ಹುಡುಕಲು ಹೋಗಿ ಅಪಾಯಕ್ಕೆ ಸಿಲುಕಿದ ‘ಮುಳುಗುತಜ್ಞ’

ಉಡುಪಿ : ಜಲಪಾತದ ಬಳಿ ರೀಲ್ಸ್ ಮಾಡಲು ಹೋಗಿ ಯುವಕ ಜಾರಿಬಿದ್ದು ಇದ್ದಕ್ಕಿದ್ದಂತೆ ಕಣ್ಮರೆಯಾದ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತದಲ್ಲಿ ನಡೆದಿದೆ. ಸದ್ಯ, ಯುವಕನ ಮೃತದೇಹ ಪತ್ತೆಗೆ ಕಾರ್ಯಾಚರಣೆ ನಡೆಯುತ್ತಿದ್ದು, ಸಾಹಸಿಗರೊಬ್ಬರು ಯುವಕನ ಮೃತದೇಹ ಪತ್ತೆ ಮಾಡಲು ಹೋಗಿ ಅಪಾಯದಲ್ಲಿ ಸಿಲುಕಿದ ಘಟನೆ ನಡೆದಿದೆ.

ಭದ್ರಾವತಿ ಮೂಲದ ಶರತ್ ಕುಮಾರ್ (23) ಜಲಪಾತ ವೀಕ್ಷಣೆಗೆಗೆಂದು ಕೊಲ್ಲೂರು ಸಮೀಪದ ಅರಿಶಿನಗುಂಡಿ ಜಲಪಾತಕ್ಕೆ ಬಂದಿದ್ದನು. ಈ ವೇಳೆ ಜಲಪಾತ ವೀಕ್ಷಣೆ ಮಾಡುತ್ತಿದ್ದಾಗ ಜಾರಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾನೆ.
ಯುವಕನ ಮೃತದೇಹ ಪತ್ತೆ ಮಾಡಲು ಹೋದ ಮುಳುಗು ತಜ್ಞರೊಬ್ಬರು ತಾವೇ ಅಪಾಯಕ್ಕೆ ಸಿಲುಕುವ ಸೂಚನೆ ಕಂಡುಬಂದು ವಾಪಸ್ ಮರಳಿ ಬಂದಿದ್ದಾರೆ. ಈಶ್ವರ ಮಲ್ಪೆ ಎಂಬ ಸ್ಥಳೀಯ ಮುಳುಗು ತಜ್ಞರು ಕಲ್ಲಿಗೆ ಕೈ ಇಟ್ಟು ಜಿಗಿದು ಹತ್ತಲು ಮುಂದಾದರು. ಆದರೆ ಅವರು ಕೂಡ ಕೈ ಜಾರಿ ಬಿದ್ದಿದ್ದಾರೆ. ನಂತರ ಜೊತೆಗಿದ್ದವರು…ಈ ಸಾಹಸ ಬೇಡ ಬನ್ನಿ ಎಂದು ಮೇಲೆ ಕರೆದುಕೊಂಡು ಬಂದಿದ್ದಾರೆ.

ಅಗ್ನಿಶಾಮಕ ದಳದ ಸಿಬ್ಬಂದಿಗಳು ಕೂಡ ಯುವಕನ ಮೃತದೇಹ ಪತ್ತೆಗೆ ಶೋಧ ಕಾರ್ಯಾಚರಣೆ ನಡೆಸಿದ್ದು, ಆದರೆ ಕಾರ್ಯಾಚರಣೆ ವಿಫಲವಾಗಿದೆ. ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನದಿ, ಫಾಲ್ಸ್ ಗಳು ತುಂಬಿ ಹರಿಯುತ್ತಿದ್ದು, ಮಳೆಗಾಲದಲ್ಲಿ ಯುವಕರು ಎಚ್ಚರದಿಂದಿರಬೇಕು.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read