ಮಂಗಳೂರು: ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಟ್ರಾಲರ್ ಬೋಟ್ ನ ಎಂಜಿನ್ ಸಮುದ್ರದಲ್ಲಿ ಕೆಟ್ಟು ಹೋದ ಪರಿಣಾಮ ಅಲೆಗಳಿಗೆ ಸಿಲುಕಿ ಬೋಟ್ ದಡಕ್ಕೆ ಅಪ್ಪಳಿಸಿರುವಘಟನೆ
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ಬಳಿ ನಡೆದಿದೆ.
ಬೋಟ್ ನಲ್ಲಿ ಮೀನುಗಾರಿಕೆಗೆ ತೆರಳಿದ್ದ 13 ಜನ ಮೀನುಗಾರರು ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ. ಉಳ್ಳಾಲದ ಮುಕ್ಕಚ್ಚೇರಿ ನಿವಾಸಿ ಮೊಹಮ್ಮದ್ ಅಶ್ಪಾಕ್ ಎಂಬುವವರಿಗೆ ಸೇರಿದ ಬೋಟ್ ಇದಾಗಿದ್ದು, ಮೀನುಗಾರಿಕೆಗೆ ತೆರಳಿದ್ದಾಗ ಅವಘಡ ಸಂಭವಿಸಿದೆ.
ಸಮುದ್ರದಲ್ಲಿ ಬೋಟ್ ಎಂಜಿನ್ ವೈಫಲ್ಯದಿಂದಾಗಿ ಬೋಟ್ ಮುಂದೆ ಚಲಿಸಲು ಸಾಧ್ಯವಾಗಿಲ್ಲ. ಮಧ್ಯರಾತ್ರಿ ಬೋಟ್ ಸಮುದ್ರದಲ್ಲಿ ಕೆಟ್ಟು ಹೋಗಿದೆ. ಅಲೆಗಳ ಹೊಡೆತಕ್ಕೆ ಸಿಲುಕಿದ್ದ ಬೋಟ್ ನಲ್ಲಿದ್ದ ಮೀನುಗಾರರು ಜೀವ ಕೈಯಲ್ಲಿ ಹಿಡಿದುಕೊಂಡು ಬೋಟ್ ನಲ್ಲಿಯೇ ಕುಳಿತಿದ್ದಾರೆ. ಅಲೆಗಳಿಂದ ತೇಲುತ್ತಾ ಬಂದ ಬೋಟ್ ಇಂದು ಬೆಳಿಗ್ಗೆ ಸೀಗ್ರೌಂಡ್ ಎಂಬಲ್ಲಿ ಸಮುದ್ರ ತೀರಕ್ಕೆ ಬಂದು ಅಪ್ಪಳಿಸಿದೆ.
ಸದ್ಯ ಮೀನುಗಾರರು ಸುರಕ್ಷಿತವಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.