ಅಸಾಮಾನ್ಯ ಘಟನೆಯೊಂದರಲ್ಲಿ, ಈಕ್ವೆಡಾರ್‌ನಲ್ಲಿ ಪೈಲಟ್ ವಿಮಾನದ ವಿಂಡ್‌ಶೀಲ್ಡ್ ಒಳಗೆ ಹಕ್ಕಿ ಸಿಲುಕಿಕೊಂಡ ನಂತರ ವಿಮಾನವನ್ನು ಕೆಳಕ್ಕೆ ಇಳಿಸಿದ ಘಟನೆ ನಡೆದಿದೆ. ಹಕ್ಕಿ ಡಿಕ್ಕಿ ಹೊಡೆದ ಬಳಿಕ ಹಕ್ಕಿಯ ರಕ್ತದಿಂದ ಪೈಲಟ್ ತೋಯ್ದು ಹೋದದ್ದನ್ನು ವಿಡಿಯೋದಲ್ಲಿ ನೋಡಬಹುದು. ಘಟನೆಯ ಬಳಿಕ ಆತ ವಿಮಾನವನ್ನು ಕೆಳಕ್ಕೆ ಇಳಿಸುವುದನ್ನು ಕಾಣಬಹುದು.
ಇದರ ಪೈಲಟ್ ಅನ್ನು ಸ್ಕ್ವಾಡ್ರನ್ ಲೀಡರ್ ಏರಿಯಲ್ ವ್ಯಾಲಿಂಟೆ ಎಂದು ಗುರುತಿಸಲಾಗಿದೆ. ಲಾಸ್ ರಿಯೋಸ್ ಪ್ರಾಂತ್ಯದ ವಿನ್ಸೆಸ್‌ನಲ್ಲಿ ಈ ಭಯಾನಕ ಘಟನೆ ಸಂಭವಿಸಿದೆ ಎಂದು ವರದಿ ಸೂಚಿಸುತ್ತದೆ.
ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಪಕ್ಷಿ ವಿಂಡ್‌ಶೀಲ್ಡ್‌ನಲ್ಲಿ ಸಿಲುಕಿಕೊಂಡಿದ್ದರಿಂದ ಅದರ ರಕ್ತವು ಪೈಲಟ್ ಮೈಮೇಲೆ ಸುರಿಯುವುದನ್ನು ನೋಡಬಹುದು.
ಪೈಲಟ್‌ನ ಮೈ ಮುಖವೆಲ್ಲಾ ರಕ್ತಸಿಕ್ತವಾದದ್ದನ್ನು ಕಾಣಬಹುದು. ಇದರ ಹೊರತಾಗಿಯೂ ಪೈಲಟ್ ಶಾಂತವಾಗಿರುವಂತೆ ತೋರುತ್ತಿದೆ ಮತ್ತು ವಿಮಾನವನ್ನು ನಿಯಂತ್ರಿಸುವಲ್ಲಿ ಪ್ರಯತ್ನಿಸುತ್ತಿದ್ದಾನೆ.
https://twitter.com/latestinspace/status/1669256175471194117?ref_src=twsrc%5Etfw%7Ctwcamp%5Etweetembed%7Ctwterm%5E1669256175471194117%7Ctwgr%5Ef78220b9af604959090c80334c78301e2eafd3fd%7Ctwcon%5Es1_&ref_url=https%3A%2F%2Fzeenews.india.com%2Faviation%2Fwatch-blood-covered-pilot-lands-plane-with-dead-bird-stuck-in-aircrafts-windshield-2622315.html