ಭಾರತೀಯ ಮೂಲದ ವ್ಯಕ್ತಿಗೆ ಮಹಿಳೆಯಿಂದ ಜನಾಂಗೀಯ ನಿಂದನೆ; ವಿಡಿಯೋ ವೈರಲ್

ಶ್ವೇತವರ್ಣೀಯ ಮಹಿಳೆಯೊಬ್ಬರು ಬಸ್ಸಿನಲ್ಲಿ ತನ್ನ ಮತ್ತು ತನ್ನ ಮಕ್ಕಳ ಮೇಲೆ ಜನಾಂಗೀಯ ನಿಂದನೆ ಮಾಡಿದ ನಂತರ ಭಾರತೀಯ ಮೂಲದ ಅಮೆರಿಕನ್ ವ್ಯಕ್ತಿ, ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಎಕ್ಸ್ (ಈ ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ, ಆ ವ್ಯಕ್ತಿ ವಾಗ್ವಾದವನ್ನು ವಿವರಿಸಿದ್ದು, ಈ ಸಂದರ್ಭದಲ್ಲಿ ನನ್ನ ರಕ್ತ ಕುದಿಯುತ್ತಿತ್ತು ಎಂದು ಅವರು ಹೇಳಿದ್ದಾರೆ.

ಮಹಿಳೆಯು ತನ್ನ ಮಕ್ಕಳಿಗೆ ಬಾಯಿ ಮುಚ್ಚಿ ಎಂದು ಹೇಳಿದ ನಂತರ ಈ ಘಟನೆ ಆರಂಭವಾಗಿದ್ದು, ನನ್ನ ಮಕ್ಕಳಿಗೆ ನೀವು ಆ ರೀತಿ ಹೇಳುವ ಹಕ್ಕಿಲ್ಲ ಎಂದು ಅವರಿಗೆ ತಿಳಿಸಿದೆ ಎಂದಿದ್ದಾರೆ.

ಆಗ ಶ್ವೇತವರ್ಣೀಯ ಮಹಿಳೆ, ಭಾರತೀಯ ಮೂಲದ ವ್ಯಕ್ತಿ ವಿರುದ್ದ ಮಾತಿನ ದಾಳಿ ಆರಂಭಿಸಿದಾಗ ಪರಿಸ್ಥಿತಿ ಉಲ್ಬಣಗೊಂಡಿದ್ದು “ನೀವು ಭಾರತದವರು. ನಿಮಗೆ ಗೌರವವಿಲ್ಲ. ನಿಮಗೆ ಯಾವುದೇ ನಿಯಮಗಳಿಲ್ಲ. ನಿಮ್ಮೆಲ್ಲರನ್ನು ಹೊರ ಹಾಕಬೇಕು” ಎಂದು ಅಬ್ಬರಿಸಿದ್ದಾಳೆ.

ಭಾರತೀಯ ಮೂಲದ ವ್ಯಕ್ತಿ ರೆಕಾರ್ಡಿಂಗ್ ಪ್ರಾರಂಭಿಸುತ್ತಿದ್ದಂತೆ, ಮಹಿಳೆ ಇನ್ನಷ್ಟು ಕೋಪಗೊಂಡಿದ್ದು, ತನ್ನ ಫೋನ್ ಅನ್ನು ಹೊರತೆಗೆದು ಮತ್ತಷ್ಟು ನಿಂದಿಸಿದ್ದಾಳೆ.

“ನೀವು ಇದೀಗ ಅಸಭ್ಯ ಮತ್ತು ಜನಾಂಗೀಯ ದ್ವೇಷಿಯಾಗಿ ವರ್ತಿಸುತ್ತಿದ್ದೀರಿ” ಎಂದು ಆ ವ್ಯಕ್ತಿ ಹೇಳಿ “ನಾನು ಅಮೆರಿಕಾದಲ್ಲಿ ಜನಿಸಿದೆ. ನೀವು ನನ್ನ ಪಾಸ್‌ಪೋರ್ಟ್ ಅನ್ನು ನೋಡಲು ಬಯಸುವಿರಾ?” ಎಂದಿದ್ದಾರೆ.

ಮಹಿಳೆ ಅಂತಿಮವಾಗಿ ಬಸ್‌ನಿಂದ ನಿರ್ಗಮಿಸಿದ್ದು, ಭಾರತೀಯ ಮೂಲದ ವ್ಯಕ್ತಿ ಭದ್ರತಾ ಸಿಬ್ಬಂದಿಗೆ ವಿಷಯ ತಿಳಿಸಿದ್ದಾರೆ. ಭಾರತೀಯ ಮೂಲದ ವ್ಯಕ್ತಿ ಹಾಕಿರುವ ಈ ಪೋಸ್ಟ್‌ ಆನ್‌ಲೈನ್‌ನಲ್ಲಿ ಗಮನಾರ್ಹ ಆಕ್ರೋಶಕ್ಕೆ ಕಾರಣವಾಗಿದೆ, ಅನೇಕರು ಮಹಿಳೆಯ ಜನಾಂಗೀಯ ಹೇಳಿಕೆಯನ್ನು ಖಂಡಿಸಿದ್ದಾರೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read