ವಿಮಾನದಲ್ಲಿ ಧೂಮಪಾನ ಮಾಡಿದ ಬ್ಲಾಗರ್‌ ಐಶ್ವರ್ಯಾ ರೈ ಅರೆಸ್ಟ್

ವಿಮಾನದಲ್ಲಿ ಧೂಮಪಾನ ಮಾಡಲು ಪ್ರಯತ್ನಿಸಿದ ಬ್ಲಾಗರ್​ ಐಶ್ವರ್ಯಾ ರೈ ಅವರನ್ನು ಬಂಧಿಸಲಾಗಿದೆ. ಮುಂಬೈನಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಧೂಮಪಾನ ಮಾಡಿ ಸಹ ಪ್ರಯಾಣಿಕರ ಜೀವಕ್ಕೆ ಅಪಾಯವನ್ನುಂಟು‌ ಮಾಡಿದ್ದಕ್ಕಾಗಿ ಈಕೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಬ್ರವರಿ 18 ರಂದು ಮುಂಬೈನಿಂದ ರಾಂಚಿಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ಸಂಭವಿಸಿದೆ ಎಂದು ವರದಿಯಾಗಿದೆ. ಜೆಟ್ ಅರೆನಾ ಪ್ರಕಾರ, ಐಶ್ವರ್ಯಾ ರೈ ವಿಮಾನದಲ್ಲಿ ಧೂಮಪಾನ ಮಾಡಿದ್ದಾರೆ. ಮಹಿಳೆ ಶೌಚಾಲಯದೊಳಗೆ ಹೋದಾಗ ಧೂಮಪಾನ ಮಾಡಿದ್ದಾಳೆ.

ವಿಮಾನದಲ್ಲಿ ಹೊಗೆ ಅಲಾರಾಂ ಹೊಡೆದಾಗ ವಿಷಯ ಬೆಳಕಿಗೆ ಬಂದಿದೆ. ನಂತರ ವಿಮಾನ ಸಿಬ್ಬಂದಿಗೆ ಆಕೆ ಸಿಕ್ಕಿಬಿದ್ದಿದ್ದಾಳೆ. ವಿಮಾನದ ಒಳಗೆ ಹೋಗುವಾಗ ಎಷ್ಟೆಲ್ಲಾ ಸೆಕ್ಯುರಿಟಿ ಚೆಕ್​ ಇದ್ದರೂ ಈಕೆ ಸಿಗರೇಟ್​ ಹಾಗೂ ಲೈಟರ್​ ಅನ್ನು ಹೇಗೆ ಸಾಗಿಸಿದ್ದಳು ಎಂಬ ಬಗ್ಗೆ ಪ್ರಯಾಣಿಕರು ಸುರಕ್ಷತೆಯ ಬಗ್ಗೆ ಆತಂಕ ಹೊರಹಾಕುತ್ತಿದ್ದಾರೆ. ಈ ಬಗ್ಗೆ ಭಾರಿ ಆಕ್ರೋಶ ವ್ಯಕ್ತವಾಗಿದೆ. ಹಿಂದೆ ಕೂಡ ಇಂಥ ಘಟನೆಗಳು ನಡೆದಿವೆ.

https://twitter.com/ArenaJet/status/1627545946417676293?ref_src=twsrc%5Etfw%7Ctwcamp%5Etweetembed%7Ctwterm%5E1627545946417676293%7Ctwgr%5E690446e44cb2891222fb5d2d3aeb62c31ddbbd13%7Ctwcon%5Es1_&ref_url=https%3A%2F%2Fwww.news18.com%2Fbuzz%2Fblogger-aishwarya-rai-arrested-for-smoking-on-a-mumbai-ranchi-flight-7135225.html

https://twitter.com/0b3650407cdb481/status/1627674229356498944?ref_src=twsrc%5Etfw%7Ctwcamp%5Etweetembed%7Ctwterm%

https://twitter.com/ArenaJet/status/1627545946417676293?ref_src=twsrc%5Etfw%7Ctwcamp%5Etweetembed%7Ctwterm%5E1627547031710613504%7Ctwgr%5E690446e44cb2891222fb5d2d3aeb62c31ddbbd13%7Ctwcon%5Es2_&ref_url=https%3A%2F%2Fwww.news18.com%2Fbuzz%2Fblogger-aishwarya-rai-arrested-for-smoking-on-a-mumbai-ranchi-flight-7135225.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read