ಕಪ್ಪು ಎಳ್ಳು ವರ್ಸಸ್ ಬಿಳಿ ಎಳ್ಳು: ಆರೋಗ್ಯಕ್ಕೆ ಯಾವುದು ಉತ್ತಮ ?

ಕಪ್ಪು ಎಳ್ಳು ಮತ್ತು ಬಿಳಿ ಎಳ್ಳು ಎರಡೂ ಆರೋಗ್ಯಕ್ಕೆ ಒಳ್ಳೇದು. ಆದ್ರೆ, ಅವುಗಳ ಪೋಷಕಾಂಶಗಳಲ್ಲಿ ಸ್ವಲ್ಪ ವ್ಯತ್ಯಾಸ ಇದೆ.

ಕಪ್ಪು ಎಳ್ಳು:

  • ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ.
  • ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಜಾಸ್ತಿ ಇದೆ.
  • ಪೊಟ್ಯಾಸಿಯಮ್, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಕಬ್ಬಿಣಾಂಶ ಇದರಲ್ಲಿ ತುಂಬಾ ಇದೆ.
  • ಎಲುಬಿನ ಶಕ್ತಿ ಮತ್ತು ಒಟ್ಟಾರೆ ಆರೋಗ್ಯಕ್ಕೆ ಬಿಳಿ ಎಳ್ಳಿಗಿಂತ ಕಪ್ಪು ಎಳ್ಳು ಹೆಚ್ಚು ಲಾಭಕಾರಿ.
  • ಹಾನಿಕಾರಕ ಸೂರ್ಯನ ಕಿರಣಗಳ ದುಷ್ಪರಿಣಾಮಗಳ ವಿರುದ್ಧ ಹೋರಾಡುವ ಶಕ್ತಿ ಹೊಂದಿದೆ.
  • ಕೂದಲು ಮತ್ತು ತ್ವಚೆಯನ್ನು ಆರೋಗ್ಯವಾಗಿಡುತ್ತೆ.

ಬಿಳಿ ಎಳ್ಳು:

  • ಬಿಳಿ ಎಳ್ಳಿನಲ್ಲಿ ಪೋಷಕಾಂಶ ಕಡಿಮೆ ಇರುತ್ತೆ.
  • ಇದರಲ್ಲಿ ಕೊಬ್ಬಿನಾಂಶ ಜಾಸ್ತಿ ಇರುತ್ತೆ.
  • ಕಪ್ಪು ಎಳ್ಳಿಗಿಂತ ಕಡಿಮೆ ಪೌಷ್ಟಿಕಾಂಶ ಹೊಂದಿದ್ರೂ, ಬಿಳಿ ಎಳ್ಳು ಕ್ಯಾಲ್ಸಿಯಂನಲ್ಲಿ ಜಾಸ್ತಿ ಇದೆ.
  • ದೇಹಕ್ಕೆ ಒಳ್ಳೆ ಕ್ಯಾಲ್ಸಿಯಂ ಕೊಡುತ್ತೆ.
  • ಮೂಳೆಗಳ ಆರೋಗ್ಯಕ್ಕೆ ಒಳ್ಳೇದು.

ಯಾವುದು ಬೆಸ್ಟ್?

  • ಎರಡೂ ಎಳ್ಳುಗಳು ಆರೋಗ್ಯಕ್ಕೆ ಲಾಭಕಾರಿ. ಆದ್ರೆ, ಕಪ್ಪು ಎಳ್ಳು ಬಿಳಿ ಎಳ್ಳಿಗಿಂತ ಹೆಚ್ಚು ಪೋಷಕಾಂಶಗಳನ್ನು ಹೊಂದಿದೆ.
  • ನಿಮಗೆ ಹೆಚ್ಚು ಕ್ಯಾಲ್ಸಿಯಂ ಬೇಕಾದ್ರೆ, ಬಿಳಿ ಎಳ್ಳು ಒಳ್ಳೆ ಆಯ್ಕೆ.
  • ನಿಮಗೆ ಹೆಚ್ಚು ಆಂಟಿ ಆಕ್ಸಿಡೆಂಟ್ ಬೇಕಾದ್ರೆ ಕಪ್ಪು ಎಳ್ಳು ಒಳ್ಳೆ ಆಯ್ಕೆ.
  • ಆಯುರ್ವೇದದ ಪ್ರಕಾರ, ಎಲ್ಲಾ ರೀತಿಯ ಎಳ್ಳಿಗಿಂತ ಕಪ್ಪು ಎಳ್ಳು ಹೆಚ್ಚು ಲಾಭಗಳನ್ನು ಹೊಂದಿದೆ.

ಎಳ್ಳು ಕಪ್ಪಾಗಿರಲಿ, ಬಿಳಿಯಾಗಿರಲಿ, ಎರಡೂ ಬಗೆಯ ಎಣ್ಣೆಗಳು ಆರೋಗ್ಯಕ್ಕೆ ತುಂಬಾ ಉಪಯುಕ್ತ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read