ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ಏರಿಕೆ, ಮುಸ್ಲಿಮರ ಓಲೈಕೆ, ಪರಿಶಿಷ್ಟರಿಗೆ ಮೀಸಲಾದ ಅನುದಾನ ಅನ್ಯ ಉದ್ದೇಶಕ್ಕೆ ಬಳಕೆ ಹೀಗೆ ಹಲವು ವೈಫಲ್ಯ ಮುಂದಿಟ್ಟುಕೊಂಡು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಇಂದಿನಿಂದ ಬಿಜೆಪಿ ಜನಾಕ್ರೋಶ ಯಾತ್ರೆ ಹಮ್ಮಿಕೊಂಡಿದೆ.
ನಾಲ್ಕು ಹಂತದಲ್ಲಿ ಹೋರಾಟ ಕೈಗೊಳ್ಳಲಾಗಿದ್ದು, ಮೈಸೂರಿನಲ್ಲಿ ಇಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಚಾಲನೆ ನೀಡಲಿದ್ದಾರೆ. ರಾಜ್ಯವ್ಯಾಪಿ ಯಾತ್ರೆ ನಡೆಸಿ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಬಿಜೆಪಿ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಯಾತ್ರೆ ನಡೆಯಲಿದ್ದು, ಮೇ 3ರಂದು ಅಂತ್ಯವಾಗಲಿದೆ.
ಮೊದಲ ಹಂತದಲ್ಲಿ ಸೋಮವಾರ ಮೈಸೂರಿನಲ್ಲಿ ಚಾಲನೆ ನೀಡಲಾಗುವುದು. ಏ.8 ಮಂಡ್ಯ, ಹಾಸನ, ಏಪ್ರಿಲ್ 9 ಕೊಡಗು, ಮಂಗಳೂರು, ಏ. 10 ಉಡುಪಿ, ಚಿಕ್ಕಮಗಳೂರು, ಏ. 11 ಉತ್ತರ ಕನ್ನಡ, ಶಿವಮೊಗ್ಗದಲ್ಲಿ ಯಾತ್ರೆ ನಡೆಯಲಿದೆ.
ಎರಡನೇ ಹಂತದಲ್ಲಿ ಏಪ್ರಿಲ್ 15ರಂದು ನಿಪ್ಪಾಣಿ, ಏಪ್ರಿಲ್ 16ರಂದು ಬೆಳಗಾವಿ, ಹುಬ್ಬಳ್ಳಿ, ಏ. 17ರಂದು ಬಾಗಲಕೋಟೆ, ವಿಜಯಪುರ, ಏ. 18 ರಂದು ಕಲಬುರ್ಗಿ, ಬೀದರ್ ನಲ್ಲಿ ಯಾತ್ರೆ ನಡೆಸಲಾಗುವುದು.
ಮೂರನೇ ಹಂತದಲ್ಲಿ ಏಪ್ರಿಲ್ 21ರಂದು ದಾವಣಗೆರೆ, ಹಾವೇರಿ, ಏಪ್ರಿಲ್ 22ರಂದು ಗದಗ, ಕೊಪ್ಪಳ, ಏಪ್ರಿಲ್ 23 ರಂದು ಯಾದಗಿರಿ, ರಾಯಚೂರು, ಏಪ್ರಿಲ್ 24ರಂದು ಬಳ್ಳಾರಿ, ವಿಜಯನಗರ, ಏಪ್ರಿಲ್ 25 ರಂದು ಚಿತ್ರದುರ್ಗ, ತುಮಕೂರಿನಲ್ಲಿ ಯಾತ್ರೆ ನಡೆಯಲಿದೆ.
ನಾಲ್ಕನೇ ಹಂತದಲ್ಲಿ ಏಪ್ರಿಲ್ 22 ರಂದು ಕೋಲಾರ, ಚಿಕ್ಕಬಳ್ಳಾಪುರ, ಮೇ 3ರಂದು ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರದಲ್ಲಿ ಯಾತ್ರೆ ನಡೆಸಲಾಗುವುದು.
ಮೈಸೂರಿನಲ್ಲಿ ಇಂದು ಕೇಂದ್ರ ಸಚಿವ ಪ್ರಯಾಣ ಜೋಶಿ ಯಾತ್ರೆಗೆ ಚಾಲನೆ ನೀಡಲಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಸಿಎಂ ಡಿ.ವಿ. ಸದಾನಂದಗೌಡ, ಪ್ರತಿಪಕ್ಷ ನಾಯಕರಾದ ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ ಮೊದಲಾದವರು ಭಾಗವಹಿಸಲಿದ್ದಾರೆ.